ನರೇಂದ್ರ ಮೋದಿ ವಿಶ್ವಕ್ಕೇ ನಾಯಕತ್ವ ಕೊಟ್ಟವರು

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರಧಾನಿ ನರೇಂದ್ರ ಮೋದಿಯವರು ಬರೀ ಭಾರತಕ್ಕೆ ನಾಯಕತ್ವ ಕೊಟ್ಟವರಲ್ಲ, ವಿಶ್ವಕ್ಕೇ ನಾಯಕತ್ವ ಕೊಟ್ಟವರು ಎಂದು ಬಿಜೆಪಿ ಡಂಬಳ ಮಂಡಳದ ಅಧ್ಯಕ್ಷ ಅಂದಪ್ಪ ಹಾರೂಗೇರಿ ಹೇಳಿದರು.

Advertisement

ರವಿವಾರ ಭಾರತೀಯ ಜನತಾ ಪಕ್ಷದ 45ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಡಂಬಳ ಹೋಬಳಿಯಾದ್ಯಂತ, ಡಂಬಳ ಮಂಡಲದ ಹಳ್ಳಿಗುಡಿ ಗ್ರಾಮದ ಬೂತ್ ನಂ. 209 ಮತ್ತು 210ರಲ್ಲಿ ಬೂತ್ ಅಧ್ಯಕ್ಷರಾದ ಆನಂದ ನಾಲ್ಕುರವಿ, ಮುತ್ತು(ಮುದಿಯಪ್ಪ) ಕರಮುಡಿ ಅವರ ಮನೆಯ ಮೇಲೆ ಧ್ವಜ ಹಾರಿಸುವುದರ ಮೂಲಕ ಸಂಸ್ಥಾಪನಾ ದಿನದ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ಜಾರಿಗೊಳಿಸಿದ ಕರ‍್ಯಕ್ರಮಗಳ ಬಗ್ಗೆ ಮನೆ ಮನೆಗೆ ತಿಳಿಸಬೇಕು ಮತ್ತು ಮಾಜಿ ಸಚಿವರಾದ ಕಳಕಪ್ಪ ಬಂಡಿಯವರು ರೋಣ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ನೂರಾರು ಅಭಿವೃದ್ಧಿ ಕರ‍್ಯಕ್ರಮಗಳನ್ನು ತಿಳಿಸಬೇಕೆಂದು ಕರ‍್ಯರ‍್ತರಿಗೆ ಕರೆ ನೀಡಿದರು.

ಕರ‍್ಯಕ್ರಮದಲ್ಲಿ ಬಸವರಾಜ ಚನ್ನಳ್ಳಿ, ಮುದ್ಲಿಂಗಪ್ಪ ಕರ‍್ಲಹಳ್ಳಿ, ಮಂಡಲ ಪ್ರದಾನ ಕರ‍್ಯರ‍್ಶಿ ಪ್ರಭು ಕರಮುಡಿ, ಜಿಲ್ಲಾ ಯುವ ಮರ‍್ಚಾ ಉಪಾಧ್ಯಕ್ಷ ರಾಜೇಶ ಅರಕಾಲ, ಪಕ್ಷದ ಹಿರಿಯರು, ಯುವಕರು, ಕರ‍್ಯರ‍್ತರು ಇದ್ದರು.


Spread the love

LEAVE A REPLY

Please enter your comment!
Please enter your name here