ನವದೆಹಲಿ:- ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರದ ಜನತೆಗೆ ನವರಾತ್ರಿಯ ಶುಭ ಕೋರಿದ್ದಾರೆ.
ಈ ಸಂಬಂಧ X ಮಾಡಿರುವ ಅವರು, ನವರಾತ್ರಿಯ ಶುಭಾಶಯಗಳು, ಭಕ್ತಿ, ಧೈರ್ಯ, ಸಂಯಮ ಮತ್ತು ದೃಢಸಂಕಲ್ಪದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಹೊಸ ಶಕ್ತಿ ಮತ್ತು ಹೊಸ ನಂಬಿಕೆಯನ್ನು ತರಲಿ, ಜೈ ಮಾತಾ ದಿ ಎಂದು ಬರೆದಿದ್ದಾರೆ.
નવરાત્રીની હાર્દિક શુભકામનાઓ!
શક્તિ, ભક્તિ અને આનંદનું આ પાવન પર્વ આપ સૌના જીવનમાં નવો ઉમંગ, ઉત્સાહ અને સુખ સમૃદ્ધિ લાવે એવી મા અંબા પાસે પ્રાર્થના…..
— Narendra Modi (@narendramodi) September 22, 2025
ಇದೇ ವೇಳೆ ಜಿಎಸ್‌ಟಿ ಸುಧಾರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ನವರಾತ್ರಿಯ ಈ ಶುಭ ಸಂದರ್ಭ ಬಹಳ ವಿಶೇಷವಾಗಿದೆ. ಜಿಎಸ್‌ಟಿ ಉಳಿತಾಯ ಹಬ್ಬದ ಜೊತೆಗೆ, ಈ ಸಮಯದಲ್ಲಿ ಸ್ವದೇಶಿ ಮಂತ್ರವು ಹೊಸ ಶಕ್ತಿಯನ್ನು ಪಡೆಯುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸಲು ನಾವೆಲ್ಲರೂ ಒಂದಾಗೋಣ ಎಂದು ಬರೆದಿದ್ದಾರೆ.
ಜಿಎಸ್ಟಿ ಉಳಿತಾಯ ಉತ್ಸವದ ಜೊತೆಗೆ, ಈ ಸಮಯದಲ್ಲಿ ಸ್ವದೇಶಿ ಮಂತ್ರವು ಹೊಸ ಶಕ್ತಿಯನ್ನು ಪಡೆಯಲಿದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸಲು ಸಾಮೂಹಿಕ ಪ್ರಯತ್ನಗಳಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದಿದ್ದಾರೆ.