ಗದಗ:– ಮಹಿಳೆಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಗೆ ನಾರಿಮಣಿಯರು ಧರ್ಮದೇಟು ಕೊಟ್ಟಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಜರುಗಿದೆ.
Advertisement
ನಿನ್ನೆ(ಮಂಗಳವಾರ) ನಡೆದ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಫೋಟೋ ಕ್ಲಿಕ್ ಮಾಡುತ್ತಿದ್ದ ಕಿಡಿಗೇಡಿ ವ್ಯಕ್ತಿಯನ್ನು ಮಹಿಳೆಯರು ಹಿಡಿದು, ಗೂಸಾ ಕೊಟ್ಟು ಅಲ್ಲೇ ಬುದ್ಧಿ ಕಲಿಸಿದ್ದಾರೆ. “ನಿನಗೂ ಹೆಂಡತಿ ಇಲ್ಲವಾ?” ಎಂದು ಆಕ್ರೋಶ ವ್ಯಕ್ತಪಡಿಸಿ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯರ ಕೋಪಕ್ಕೆ ಎದುರಾಡಲು ಆಗದೇ, ಇಂಗುತಿಂದ ಮಂಗನಂತೆ ನಿಂತ ವ್ಯಕ್ತಿ, ಬಳಿಕ ಗದಗ ನಗರ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.


