ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗದಗ ಹೊರಡಿಸಿದ ಆದೇಶದ ಮೇರೆಗೆ ಮುಂಡರಗಿಯ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಿರ್ಮಲಾ ಗಣಪತಿ ತರವಾಡೆ ಇವರನ್ನು ಆಂತರಿಕ ದೂರು ನಿವಾರಣಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಗದಗ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಿಳಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟಲು ಆಂತರಿಕ ದೂರು ನಿವಾರಣಾ ಸಮಿತಿ ರಚಿಸಿ ವಿಚಾರಣೆಯ ಮುಖಾಂತರ ಸಮಸ್ಯೆ ನಿವಾರಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಿ ಸೇವೆ ಮಾಡಲು ಅವಕಾಶ ನೀಡಲಾಗಿದೆ.
ನಿರ್ಮಲಾ ತರವಾಡೆಯವರು ಸತತ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದು, ಹಲವಾರು ಮಹಿಳೆಯರ ಬದುಕಿಗೆ ನೆರವಾಗಿದ್ದಾರೆ. ಶಿಕ್ಷಣ, ಕೌಶಲ್ಯ, ಕ್ರೀಡೆ, ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರದ ಬೆಳವಣಿಗೆಗಾಗಿ ತಮ್ಮ ಸಂಸ್ಥೆ ವತಿಯಿಂದ ಕಾರ‍್ಯಕ್ರಮ, ತರಬೇತಿ ಶಿಬಿರ ಆಯೋಜಿಸಿದ್ದಾರೆ.
ಇವರ ಸೇವೆ ನಿರಂತರವಾಗಿ ಸಾಗಲಿ ಎಂದು ನಿರ‍್ಮಲಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ನೆಲಜೇರಿ, ಬಸವರಾಜ ಜಾಧವ, ಗೀತಾ ಜಾಧವ, ಮಂಜುನಾಥ ಪಟ್ಟಣಶೆಟ್ಟಿ, ಸಾಹಿತಿಗಳಾದ ಮರುಳಸಿದ್ದಪ್ಪ ದೊಡ್ಡಮನಿ, ಭಾಗ್ಯ ಹುರಕಡ್ಲಿ, ರಮಾ ಚಿಗಟೇರಿ, ಶಿವಲೀಲಾ, ಕಸ್ತೂರಿ ವೀರಣ್ಣ ಕಡಗದ. ಗಣೇಶಗೌಡ ಪಾಟೀಲ, ಹುಚ್ಚಿರಪ್ಪ ಈಟಿ, ಮಹಾಲಕ್ಷ್ಮಿ, ಅಶ್ವಿನಿ, ಸವಿತಾ ಹಂದ್ರಾಳ, ನವರಸ ಕಲಾ ಸಂಘ ಬೆಟಗೇರಿ, ಶ್ರೀ ಗಣೇಶ ಸೇವಾ ಸಂಸ್ಥೆ ಬೆಟಗೇರಿ ಇವರು ಅಭಿನಂದನೆ ಸಲ್ಲಿಸಿದ್ದಾರೆ.