ಬೆಂಗಳೂರಿಗೆ ಭೇಟಿ ಕೊಟ್ಟ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ: ಹೂಗುಚ್ಛ ನೀಡಿ ಸ್ವಾಗತಿಸಿದ ವಿಜಯೇಂದ್ರ!

0
Spread the love

ಬೆಂಗಳೂರು: ಬಿಜೆಪಿ ಬಣ ಬಡಿದಾಟ ದಿನದಿಂದ ದಿನಕ್ಕೆ ತಾರಕ್ಕೇರ್ತಿದೆ, ಯತ್ನಾಳ್ ಟೀಂ vs ವಿಜಯೇಂದ್ರ‌ ಟೀಂ ಮಧ್ಯೆ ಟಾಕ್ ವಾರ್ ಜೋರಾಗ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

Advertisement

ಇಂದು ಬೆಳಗ್ಗೆ ರಾಜ್ಯಕ್ಕೆ ತರುಣ್ ಚುಗು ಅವರು ಆಗಮಿಸಿದರು. ಬಿಜೆಪಿ ಕಚೇರಿಗೆ ಬಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು.

ವಿಜಯೇಂದ್ರ ಬಣದಿಂದ ಒಗ್ಗಟ್ಟಾಗಿ ನಿಂತು ಸ್ವಾಗತ ಕೋರಲಾಯಿತು. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪಕ್ಷದ ಕಚೇರಿಗೆ ರಾಷ್ಟ್ರೀಯ ನಾಯಕ ಆಗಮಿಸಿದರು. ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮೊದಲಿಗೆ ಸಂಘಟನಾ ಪರ್ವ ಸಂಬಂಧ 30 ಪ್ರಮುಖರ ಜತೆ ಸಭೆ ಇದೆ.

ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾ ಅಧ್ಯಕ್ಷರು, ಮಂಡಲ, ಬೂತ್ ಸಮಿತಿಗಳ ಪ್ರಮುಖರು ಭಾಗಿಯಾಗಿದ್ದಾರೆ. ವಿಜಯೇಂದ್ರ, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ಸುನೀಲ್ ಕುಮಾರ್, ರಾಜ್ಯ ಪದಾಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದಾರೆ.


Spread the love

LEAVE A REPLY

Please enter your comment!
Please enter your name here