ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಕಬ್ಬಡ್ಡಿ ಪಂದ್ಯಾವಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ (ರಾಷ್ಟ್ರೀಯ ಯುವ ದಿನಾಚರಣೆ) ಹಾಗೂ ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕಬ್ಬಡ್ಡಿ ಪಂದ್ಯಾವಳಿಯನ್ನು ನಗರದ ವಿಜಯ ಪಿಯು ಕಾಲೇಜಿನ ಆವರಣದಲ್ಲಿ ಜ. 8 ಮತ್ತು 9ರಂದು ಆಯೋಜಿಸಲಾಗಿದೆ.

Advertisement

ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು (ತೋಟಪ್ಪ) ಕುರಡಗಿ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆಗಮಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಗರಿಷ್ಠ ತೂಕ 60 ಕೆ.ಜಿ, ವಯೋಮಿತಿ 15ರಿಂದ 35 ವರ್ಷ ಇರಬೇಕು. ಯುವಕರಿಗೆ ಪ್ರಥಮ ಬಹುಮಾನವನ್ನು 10001 ರಊ, ದ್ವಿತೀಯ ಬಹುಮಾನ 7501 ರೂ, ತೃತೀಯ ಬಹುಮಾನ 5001 ಹಾಗೂ ಟ್ರೋಫಿಗಳನ್ನ ಕೊಡಲಾಗುವುದು.

ಯುವತಿಯರಿಗೂ ಅವಕಾಶ ನೀಡಿದ್ದು, ಗರಿಷ್ಠ ತೂಕ 55 ಕೆ.ಜಿ, ವಯೋಮಿತಿ 15ರಿಂದ 35 ವರ್ಷವಾಗಿದ್ದು, ಪ್ರಥಮ ಬಹುಮಾನ 7501 ರೂ, ದ್ವಿತೀಯ ಬಹುಮಾನ 5001 ರೂ, ತೃತೀಯ ಬಹುಮಾನ 2501 ಹಾಗೂ ಟ್ರೋಫಿಗಳನ್ನ ಕೊಡಲಾಗುವುದು. ಉತ್ತಮ ರೈಡರ್, ಉತ್ತಮ ಕ್ಯಾಚರ್ ಹಾಗೂ ಆಲ್ ರೌಂಡರ್ ಯುವಕ-ಯುವತಿಯರಿಗೆ ಆಕರ್ಷಿಕ ಬಹುಮಾನವನ್ನು ಕೊಡಲಾಗುವುದು. ಜ. 8ರ ಬೆಳಿಗ್ಗೆ 10 ಗಂಟೆಯ ಒಳಗಾಗಿ ತಂಡವನ್ನು ನೋಂದಾಯಿಸಿಕೊಳ್ಳಬೇಕು (ಶರತ್ತುಗಳು ಅನ್ವಯ)

ಜ.9ರಂದು ಸಮಾರೋಪ ಸಮಾರಂಭದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ, ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ ಭಾಗವಹಿಸಲಿದ್ದಾರೆ. ಎಲ್ಲಾ ಕ್ರೀಡಾ ಪ್ರೇಮಿಗಳು ಕ್ರೀಡಾಕೂಟಕ್ಕೆ ಬಂದು ಪ್ರೋತ್ಸಾಹಿಸಬೇಕೆಂದು ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನವೀನ ಕುರ್ತಕೋಟಿ-7483877256, ಸಚಿನ ಮಡಿವಾಳರ-8951430102 ಸಂಪರ್ಕಿಸಬಹುದಾಗಿದೆ.


Spread the love

LEAVE A REPLY

Please enter your comment!
Please enter your name here