ವಿಜಯಸಾಕ್ಷಿ ಸುದ್ದಿ, ಗದಗ: ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಗದಗ ಸ್ಫೋರ್ಟ್ಸ್ ಅಕಾಡೆಮಿಯ ನಾಲ್ವರು ಶೂಟರ್ ಗಳು ಭಾಗವಹಿಸಿ ಸಾಧನೆ ಮೆರೆದಿದ್ದಾರೆ.
ಸಂಜನಾ ಎಸ್.ಚಿಕ್ಕನಗೌಡರ ದ್ವಿತೀಯ, ಮನ್ವಿತಾ ಎಂ.ಬಡ್ನಿ ತೃತೀಯ, ಅಮೃತಾ ಕಬಾಡಿ ನಾಲ್ಕನೇ ಸ್ಥಾನ, 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಪಾಲ್ಗುಣಿ ವಾರಕರ್ ನಾಲ್ಕನೇ ಸ್ಥಾನ ಹಾಗೂ ಸುಶಾಂತ ಪಿ.ಉಗಲಾಟ ಭಾಗವಹಿಸಿ ತಮ್ಮ ಶೂಟಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದರು.
2025ರ ಜ.2ರಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆಯವ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಗೆ ಸಂಜನಾ ಎಸ್.ಚಿಕ್ಕನಗೌಡರ, ಮನ್ವಿತಾ ಎಂ.ಬಡ್ನಿ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀನಿವಾಸ ಹುಯಿಲಗೋಳ, ವಿಜಯಕುಮಾರ ಗಡ್ಡಿ, ಮುರಘರಾಜೇಂದ್ರ ಬಡ್ನಿ, ಪ್ರಾಚರ‍್ಯರಾದ ಶಿವಕುಮಾರ ಹಾವೇರಿ, ಸನ್ಮಾರ್ಗ್ ಕಾಲೇಜಿನ ಪ್ರಚಾರ್ಯರಾದ ಮೃತ್ಯುಂಜಯ ಹಿರೇಮಠ, ವ್ಹಿ.ಎಂ. ಚಿಕ್ಕಣ್ಣ, ಗಣೇಶ ಕಬಾಡಿ, ಸತೀಶ ಚಿಕ್ಕನಗೌಡರ, ಪ್ರದೀಪ ಉಗಲಾಟ ಹಾಗೂ ತರಬೇತುದಾರರಾದ ಬಸವರಾಜ ಹೊಂಬಾಳಿ ಅಭಿನಂದಿಸಿದ್ದಾರೆ.