ಶರಣಾಗತಿಗೂ ಮುನ್ನ ನಕ್ಸಲ್ ನಾಯಕಿ ಮುಂಡಗಾರು ಲತಾ ಎಕ್ಸ್ ಕ್ಲೂಸಿವ್ ಮಾತು!

0
Spread the love

ಚಿಕ್ಕಮಗಳೂರು : ನಕ್ಸಲ್ ನಾಯಕ ವಿಕ್ರಂಗೌಡನ ಎನ್ ಕೌಂಟರ್ ನಿಂದ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿರೋದಂತು ನಿಜ. ಒಂದೇ ಒಂದು ಎನ್ ಕೌಂಟರ್ ಮೂಲಕ ಪೊಲೀಸರು ಕಾಡಲ್ಲಿ ಕೆಂಪು ಉಗ್ರರ ಸದ್ದಡಗಿಸಿದ್ದಾರೆ. ಬಹುತೇಕ ಕಾಫಿನಾಡು ಕಾಡಲ್ಲಿ ನಕ್ಸಲರ ಯುಗಾಂತ್ಯವಾದಂತಿದೆ.

Advertisement

ಜ.8ರಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ಜನ ನಕ್ಸಲರು ಶರಣಾಗತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಶರಣಾಗತಿಗೆ ಮುನ್ನಾ ಕಾಡಿನಲ್ಲಿ ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ ಸಭೆ ನಡೆಸಿದರು.

ಸಭೆ ನಡೆಸಿದ ಬಳಿಕ ನಕ್ಸಲ್ ನಾಯಕಿ ಮುಂಡುಗಾರು ಲತಾ ಎಕ್ಸ್ ಕ್ಲೂಸಿವ್ ಮಾತುಗಳನ್ನಾಡಿದ್ದಾರೆ. ಪ್ರಜಾ ತಾಂತ್ರಿಕ ಸಂವಿಧಾನ ಪರ ಹೋರಾಟ ಬಯಸುತ್ತಿದ್ದಾರೋ. ಅದೇ ರೀತಿ ನಾವು ಜನರ ಪರ ಹೋರಾಟ ಮಾಡ್ತೇವೆ. ಜನರ ಪರ ಕೊನೆಯ ಉಸಿರು ಇರುವ ತನಕ ನಿಲ್ತೇವೆ ಜನ್ರಿಗಾಗಿ ನಮ್ಮ ಹೋರಾಟ ಎಂದಿದ್ದಾರೆ.

ಕರ್ನಾಟಕ, ಕೇರಳ ತಮಿಳು ನಾಡಿನವ್ರು ಅರು ಜನ ಡಿಸೈಡ್ ಮಾಡಿ ಚರ್ಚೆ ಮಾಡಿದ್ದಾರೆ. ಅಲ್ಲಿನ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದಾರೆ. ಎಲ್ಲಾ ಕಾಮ್ರೆಡ್ ಗಳನ್ನು ನಾವು ಸ್ವಾಗತಿಸುತ್ತೇವೆ.

ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇ ಅನ್ನೋ ಭರವಸೆಯೊಂದಿಗೆ ಬರ್ತಿದ್ದೇವೆ. ನಮ್ಮ ಶರಣಾಗತಿ ಪ್ರಕ್ರಿಯೆಗೆ
ಸಂಘಟಕರೆಲ್ಲ ಶ್ರಮ ಹಾಕಿದ್ದಾರೆ ಎಂದಿದ್ದಾರೆ.

ಒಟ್ಟಾರೆ ಮಲೆನಾಡಿನ ಸಮಸ್ಯೆಗಳು ಹಾಗೂ ಆದಿವಾಸಿ ಜನರ ರಕ್ಷಣೆಗೆ ಬಂದೂಕು ಹಿಡಿದು ಹೋರಾಟ ನಡೆಸುತ್ತಾ ಭೂಗತರಾಗಿದ್ದ ನಕ್ಸಲಿಯರಲ್ಲಿ ಹಲವು ಮಂದಿ ಎನ್‌ ಕೌಂಟರ್‌ಗೆ ಬಲಿಯಾಗಿದ್ದಾರೆ. ಕೆಲವು ಮಂದಿ ಶರಣಾಗಿದ್ದಾರೆ. ಇದೀಗ ಬಾಕಿ ಉಳಿದಿರುವ 6 ಮಂದಿ ಶರಣಾಗತಿಗೆ ಮುಂದೆ ಬಂದಿದ್ದು, ಅವರು ಮುಖ್ಯ ವಾಹಿನಿಗೆ ಬಂದರೆ ಮಲೆನಾಡು ಮತ್ತು ಕರಾವಳಿಯಲ್ಲಿ ನಕ್ಸಲಿಯರ ಅಧ್ಯಾಯ ಕೊನೆಯಾಗಲಿದೆ.


Spread the love

LEAVE A REPLY

Please enter your comment!
Please enter your name here