ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
Advertisement
ಪ್ರಕರಣ ಸಂಬಂಧ ಮೂವರನ್ನು ಅರೆಸ್ಟ್ ಮಾಡಲಾಗಿದ್ದು, 50 ಕೋಟಿ ಮೌಲ್ಯದ 45 ಕೆಜಿ ಹೈಡ್ರೋಗಾಂಜಾ ಮತ್ತು 6 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಿದರು. ಆರೋಪಿಗಳು 250 ಫುಡ್ ಟಿನ್‌ಗಳಲ್ಲಿ ಡ್ರಗ್‌ಗಳನ್ನು ಸೀಲ್ ಮಾಡಿಕೊಂಡು ತಂದಿದ್ದರು. ಅಧಿಕಾರಿಗಳ ಕಾರ್ಯಾಚರಣೆಯಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಒಟ್ಟಾರೆ ಈ ವರ್ಷದಲ್ಲೇ ಎನ್‌ಸಿಬಿ 100 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, 45 ಆರೋಪಿಗಳನ್ನು ಬಂಧಿಸಿದೆ.