HomeGadag Newsಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ

ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯ ಶಾಲೆ, ಕಾಲೇಜುಗಳಿಗೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಬುಧವಾರ ಪಟ್ಟಣದ ಎಪಿಎಂಸಿ ಹತ್ತಿರವಿರುವ ದಿ. ತೋಟಪ್ಪ ಬಸಪ್ಪ ಮಾನ್ವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಗೃಹ ಮತ್ತು ಪೇವರ್ಸ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ಶೌಚಗೃಹ, ಮೂತ್ರಾಲಯ, ಕುಡಿಯುವ ನೀರು, ಆಟದ ಮೈದಾನ ಇತ್ಯಾದಿಗಳ ಕೊರತೆ ಇರುವ ಶಾಲೆಗಳ ಪಟ್ಟಿ ಮಾಡಲಾಗಿದೆ. ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ಕಾರ್ಯವನ್ನು ಮಾಡುತ್ತೇವೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಾಗಿದೆ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷೆ ಸಾವಿತ್ರಿ ಕುರಿ, ಫಕ್ಕೀರೇಶ ರಟ್ಟಿಹಳ್ಳಿ, ಯಲ್ಲಪ್ಪ ಮೇಗೂರ, ಗೂಳಪ್ಪ ಹುರಕನವರ, ರಾಮಪ್ಪ ಟೋಕಾಳಿ, ಹನುಮಂತಪ್ಪ ಹಟ್ಟಿ, ನಿಂಗಪ್ಪ ಕಡ್ಡಿಪೂಜಾರ, ಬಸವರಾಜ ಕುಸುಗಲ್, ಸಿದ್ದಪ್ಪ ಕನವಳ್ಳಿ, ಮಂಜಪ್ಪ ಕೆರೂರ, ಯಲ್ಲಪ್ಪ ಕಡ್ಡಿಪೂಜಾರ, ಲಕ್ಷ್ಮವ್ವ ಮಳ್ಳಳ್ಳಿ, ನೀಲವ್ವ ಶ್ಯಾಗೋಟಿ, ಮಂಜವ್ವ ಮುಳಗುಂದ, ಲಲಿತಾ ಕೋಳಿವಾಡ, ಸುಮಂಗಳಾ ದೊಡ್ಡಮನಿ, ಮಾಳಪ್ಪ ಶರಸೂರಿ, ಲಕ್ಷ್ಮಿ ಬಳೂಟಗಿ, ಸಿಮ್ರಾನ್ ಬೇಪಾರಿ, ಹನುಮಂತಪ್ಪ ಶರಸೂರಿ, ಮುಖ್ಯೋಪಾಧ್ಯಾಯ ಎಸ್.ಎನ್. ಕ್ಷತ್ರಿ ಹಾಗೂ ಶಿಕ್ಷಕರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!