ಬೆಂಗಳೂರು: ಅನೇಕರು ಜೀವನದಲ್ಲಿ ಒಂಟಿಯಾಗಿರುತ್ತಾರೆ, ಅವರು ತಮಗಾಗಿ ಗೆಳೆಯ, ಗೆಳತಿಯರನ್ನು ಹುಡುಕುತ್ತಾರೆ. ಅವರು ಗೆಳೆಯ, ಗೆಳತಿಯರನ್ನು ಬಾಡಿಗೆಗೆ ಪಡೆಯಬಹುದು. ಹೌದು ಇಂದು ವ್ಯಾಲೆಂಟೇನ್ ಡೇ ಹಿನ್ನೆಲೆ ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ? ಹಾಗಾದ್ರೆ ಒಂದು ದಿನದ ಬಾಡಿಗೆ ಬಾಯ್‌ಫ್ರೆಂಡ್‌ಗಾಗಿ ಪೇ ಮಾಡಿ ಎಂದು ಬರೆದಿರುವ ಪೋಸ್ಟರ್ ವೈರಲ್ ಆಗಿದೆ.
ನಗರದ ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪೋಸ್ಟರ್ಗಳು ಕಂಡು ಬಂದಿದ್ದು. ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್ಗಳ ಬಳಿ ‘ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್ಗಳು ಕಂಡು ಬಂದಿವೆ.
ಈ ವಿಚಿತ್ರ ಪೋಸ್ಟರ್ಗಳನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪೋಸ್ಟರ್ ಅಂಟಿಸುವ ಮೂಲಕ ದುಷ್ಟರು ನಗರದ ಸಂಸ್ಕೃತಿ ಹಾಳು ಮಾಡಲು ಹೊರಟಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.