ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ನಟ ದರ್ಶನ್ ನೇರವಾಗಿ ಕೋರ್ಟ್ಗೆ ಹಾಜರಾಗಲು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಟಿವಿ ಸೌಲಭ್ಯ ನೀಡಿರುವುದಕ್ಕೆ ನ್ಯಾಯಾಧೀಶರಿಗೆ ದರ್ಶನ್ ಧನ್ಯವಾದ ಹೇಳಿದರು. ಆದರೆ ನ್ಯಾಯಾಧೀಶರು, “ನಾವು ಕರ್ತವ್ಯ ಮಾಡಿದ್ದೇವೆ, ಧನ್ಯವಾದ ಅಗತ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.
ವಿಚಾರಣೆ ವೇಳೆ ದರ್ಶನ್ ಕುಟುಂಬದವರು ಭೇಟಿ ನೀಡುವಾಗ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಜೊತೆಗೆ ಒಂದು ದಿನವಾದರೂ ಖುದ್ದಾಗಿ ಕೋರ್ಟ್ಗೆ ಹಾಜರಾಗಲು ಸೂಚನೆ ನೀಡಬೇಕು ಎಂದು ವಕೀಲರ ಮೂಲಕ ಅರ್ಜಿ ಮಂಡಿಸಲಾಯಿತು.
“ಜೈಲಿನ ಊಟ ಸಾಕಾಗುತ್ತಿಲ್ಲ. ಕೋರ್ಟ್ಗೆ ಹಾಜರಾದರೆ ಮನೆಯೂಟ ಸಿಗುತ್ತದೆ” ಎಂದು ದರ್ಶನ್ ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳಿಗೆ ಭೇಟಿ ಸಮಯವೂ ಕಡಿಮೆ ಸಿಗುತ್ತಿದೆ ಎಂದು ವಕೀಲರು ವಾದಿಸಿದರು.
ಮನವಿ ಆಲಿಸಿದ ನ್ಯಾಯಾಧೀಶರು, ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಸೂಚಿಸಿದರು. ಪ್ರಕರಣದ ಮುಂದಿನ ವಿಚಾರಣೆ ಕಾದುನೋಡಲಾಗುತ್ತಿದೆ.



