ಕನ್ನಡ ಕಿರುತೆರೆಯಲ್ಲಿ ಗೊಂಬೆ ಎಂದೇ ಖ್ಯಾತಿ ಘಳಿಸಿದ್ದ, ಬಿಗ್ಬಾಸ್ ಮಾಜಿ ಸ್ಪರ್ಧಿ ನೇಹಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲ ತಿಂಗಳ ಹಿಂದೆ ನೇಹಾ ಗೌಡ ಹಾಗೂ ಚಂದನ್ ದಂಪತಿ ಮುದ್ದು ಮಗುವಿನ ಪೋಷಕರಾಗಿದ್ದು ಇದೀಗ ದಂಪತಿ ಮಗಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ನೇಹಾ ಗೌಡ ಇದೀಗ ತಮ್ಮ ಮಗಳಿಗೆ ಶಾರದ ಎಂದು ಹೆಸರನ್ನಿಟ್ಟಿದ್ದಾರೆ.
ನಟಿ ನೇಹಾ ಗೌಡ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಹಾಲ್ವೊಂದರಲ್ಲಿ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ನಾಮಕರಣ ಶಾಸ್ತ್ರದಲ್ಲಿ ಕಿರುತೆರೆಯ ಕಲಾವಿದರು, ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.
ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಂದನ್ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರೋ ಅಂತರಪಟ ಸೀರಿಯಲ್ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.
ಅಕ್ಟೋಬರ್ 29ರಂದು ನಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಮಗಳ ನಾಮಕರಣದ ಜೊತೆ ಸೋನು ಗೌಡ ಬರ್ತಡೇಯನ್ನು ಕುಟುಂಬಸ್ಥರು ಒಟ್ಟಿಗೆ ಸೆಲೆಬ್ರೇಟ್ ಮಾಡಿದ್ದಾರೆ.