ನೆಲಮಂಗಲ: ಮಾಕಳಿ ಸಮೀಪದ ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡ ಭಾರೀ ನಷ್ಟಕ್ಕೆ ಕಾರಣವಾಗಿದೆ. ನೆಲಮಂಗಲ ರಸ್ತೆಯಲ್ಲಿರುವ ಈ ಗೋದಾಮು ಕೆಲವೇ ನಿಮಿಷಗಳಲ್ಲಿ ಧಗಧಗ ಹೊತ್ತಿ ಉರಿದಿದೆ.
ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ್ದು, ಭಯಾನಕ ಶಬ್ದಗಳಿಂದ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಗೋದಾಮಿನೊಳಗಿದ್ದ 40 ಸಿಬ್ಬಂದಿ ತಕ್ಷಣ ಸ್ಥಳ ತೊರೆದು ಓಡಿ ಪಾರಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಆದರೆ ಬೆಂಕಿ ಪಕ್ಕದಲ್ಲಿದ್ದ ಎಸಿ ಗೋಡೌನ್ಗೆ ವ್ಯಾಪಿಸಿ, ಅಲ್ಲಿದ್ದ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಗ್ನಿ ಅವಘಡದ ಮೂಲ ಕಾರಣ ಪತ್ತೆಗೆ ಪರಿಶೀಲನೆ ಆರಂಭಗೊಂಡಿದ್ದು, ಹಾನಿಯ ಪ್ರಮಾಣದ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.



