ನೆಲಮಂಗಲ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನೆಲಮಂಗಲ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸೊಂಡೇಕುಪ್ಪ ಪ್ಲೇ ಓವರ್ ಮೇಲೆ ನಡೆದಿದೆ.
ಬಲರಾಮೇಗೌಡ (60) ಮೃತ ದುರ್ಧೈವಿಯಾಗಿದ್ದು, ಬೆಂಗಳೂರು ಮೂಲಕ ಕುಣಿಗಲ್ ಗೆ ತೆರಳುತ್ತಿದ್ದ ಮೃತ ವ್ಯಕ್ತಿ,
ವೇಗವಾಗಿ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ನರಳಿ ಸಾವನ್ನಪ್ಪಿದ್ದಾನೆ.
ಲಾರಿ ಹಾಗೂ ಚಾಲಕ ಪೊಲೀಸರು ವಶಕ್ಕೆ ಪಡೆದಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



