ನೆಲಮಂಗಲ:- ರಿಹ್ಯಾಬ್ ಸೆಂಟರ್ನಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ಜರುಗಿದೆ.
ಕೇರಳ ಮೂಲದ ಕೆ.ಜೆ.ಮನೀಶ್(42) ಮೃತ ವ್ಯಕ್ತಿ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಕೈ-ಕಾಲು ಕಟ್ಟಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಹ್ಯಾಬ್ ಸೆಂಟರ್ ಸಿಬ್ಬಂದಿ ಚಿತ್ರಹಿಂಸೆ ನೀಡಿರುವ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದ್ದು, 2 ಗಂಟೆಗಳ ಕಾಲ ಇರಬೇಕಾದ ವಿಡಿಯೋ ಕೇವಲ 2:42 ನಿಮಿಷ ಮಾತ್ರ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಕುಟುಂಬಸ್ಥರು ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್ಗೆ ಮನೀಶ್ರನ್ನು 4 ದಿನದ ಹಿಂದೆ ಸೇರಿಸಿದ್ದರು. ಸದ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮನೀಶ್, ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಇತ್ತ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.



