ಮೈಸೂರು: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಬಿಗ್ಬಾಸ್ ಸ್ಪರ್ಧಿ ರಜತ್ ಸಿಗರೇಟ್ ಹಿಡಿದು ಬಿಂದಾಸ್ ಫೋಟೋಶೂಟ್ ನಡೆಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾರಿನಿಂದ ಇಳಿಯುತ್ತಲೇ ವಿಲನ್ ಲುಕ್ಕಿನಲ್ಲಿ ನಡೆಸಿದ ಈ ಫೋಟೋಶೂಟ್ನ್ನು ರಜತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ, ಈ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಶೂಟಿಂಗ್ ಸೆಟ್ನಲ್ಲಿ ಮಚ್ ಹಿಡಿದು ಜೈಲಿಗೆ ಹೋಗಿ ಬೇಲ್ ಮೇಲೆ ಹೊರಬಂದ ರಜತ್, ಈಗಲೂ ತಮ್ಮ ಹುಚ್ಚಾಟದ ಕಾರಣದಿಂದ ಸದ್ದು ಮಾಡಿದ್ದಾರೆ. ಸಿಗರೇಟ್ ಮತ್ತು ಅತಿ ಧೈರ್ಯಶಾಲಿ ಲುಕ್ಕಿನ ಫೋಟೋಶೂಟ್, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.



