2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹೆಚ್ಚು ಸದ್ದು ಆಗಿದ್ದಂತೂ ನಿಜ. ಅದರಲ್ಲೂ ವಿವಾದದ ಮೂಲಕ ಎಂಬುವುದು ಗಮನಾರ್ಹ.
ಎಸ್, 2025 ರ ಏಷ್ಯಾಕಪ್ ಸುದ್ದಿಯಾದದ್ದಕ್ಕಿಂತ ಹೆಚ್ಚಾಗಿ, ವಿವಾದಗಳಿಂದಲೇ ಸಖತ್ ಸದ್ದು ಮಾಡಿತು. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವೆ ಹುಟ್ಟಿಕೊಂಡ ಹ್ಯಾಂಡ್‌ಶೇಕ್ ವಿವಾದ ಪಂದ್ಯಾವಳಿ ಮುಗಿಯುವುದಕ್ಕೆ ಬಂದರೂ ಇನ್ನು ತಣ್ಣಗಾಗಿಲ್ಲ. ಪಾಕ್ ಆಟಗಾರರೊಂದಿಗೆ ಟೀಂ ಇಂಡಿಯಾ ಕೈಕುಲುಕಲು ನಿರಾಕರಿಸಿದ್ದು, ಪಾಕ್ ಕ್ರಿಕೆಟ್ ಮಂಡಳಿ ICCಗೆ ದೂರು ನೀಡಿತ್ತು. ಈಗ ಪಾಕ್ ನಾಯಕ ಸಲ್ಮಾನ್ ಆಘಾ ಈ ವಿವಾದದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ನಾನು 2007-08 ರಿಂದ, ಅಂಡರ್-16 ಯುಗದಿಂದ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ ಹ್ಯಾಂಡ್‌ಶೇಕ್ ಮಾಡದ ತಂಡವನ್ನು ನಾನು ಎಂದಿಗೂ ನೋಡಿರಲಿಲ್ಲ. ಈ ವೇಳೆ ತಮ್ಮ ತಂದೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು ಈ ಹಿಂದೆಯೂ ಸಹ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂತಹ ಪರಿಸ್ಥಿತಿ ಉದ್ಭವಿಸಿರಲಿಲ್ಲ. ನಾನು ಬಹಳ ಸಮಯದಿಂದ ಕ್ರಿಕೆಟ್ ಆಡುತ್ತಿದ್ದೇನೆ. ನನ್ನ ತಂದೆ ಕೂಡ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದು, ನನಗಿಂತ ಮೊದಲು 20 ವರ್ಷಗಳಿಂದ ಕ್ರಿಕೆಟ್ ನೋಡುತ್ತಿದ್ದಾರೆ. ಆದರೆ ಅವರು ಕೂಡ ಈ ರೀತಿಯ ಘಟನೆ ನಡೆದಿರುವುದನ್ನು ನೋಡಿರುವುದಾಗಿ ನನಗೆ ಹೇಳಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಇದಕ್ಕಿಂತ ಕೆಟ್ಟದಾಗಿದ್ದಾಗಲೂ ನಾವು ಕೈಕುಲುಕಿದೆವು’ ಎಂದು ಆಘಾ ಹೇಳಿದ್ದಾರೆ.
ಇನ್ನು ಫೈನಲ್ ಪಂದ್ಯಕ್ಕೆ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿರುವ ಸಲ್ಮಾನ್ ಆಘಾ, ‘ತಂಡದ ಆಟಗಾರರಿಗೆ ಮುಕ್ತವಾಗಿ ಆಡಲು ಹೇಳಲಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ವೇಗದ ಬೌಲರ್ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಾವು ತಡೆದರೆ, ಏನು ಉಳಿಯುತ್ತದೆ? ಅದು ಅಗೌರವವಲ್ಲದಿದ್ದರೆ ನಾನು ಯಾರನ್ನೂ ತಡೆಯುವುದಿಲ್ಲ’ ಎಂದು ಹೇಳಿದ್ದಾರೆ.


