ಗದಗ:- ತಾಲೂಕಿನ ಸುಕ್ಷೇತ್ರ ಹರ್ಲಾಪುರ ಗ್ರಾಮದಲ್ಲಿ ಇಂದು ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಸಿದ್ದರಾಮಯ್ಯ ಅವರು, ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಪ್ರೀತಿಯಿಂದ ಕೈ ಬೀಸಿದ್ದಾರೆ.
ಅಚ್ಚರಿ ಅಂದ್ರೆ ದೇವಸ್ಥಾನದಲ್ಲಿ ದೀಪ ಹಚ್ಚಲು ಪರದಾಡಿದ ಸಿಎಂ ಸಿದ್ದರಾಮಯ್ಯ ಭಂಡಾರ ಹಚ್ಚಿಸಿಕೊಳ್ಳಲು ನಿರಾಕರಿಸಿರುವ ದೃಶ್ಯವೂ ಕಂಡು ಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೂ ಗ್ರಾಸವಾಗಿದೆ.
ಕಾರ್ಯಕ್ರಮದಲ್ಲಿ ಸಿಎಂಗೆ ಡಿಸಿಎಂ ಡಿ.ಕೆ ಶಿವಕುಮಾರ, ಕಾನೂನು ಸಚಿವ ಹೆಚ್.ಕೆ.ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ ಸಾಥ್ ಕೊಟ್ಟಿದ್ದಾರೆ.
ಇದೇ ವೇಳೆ DCM ಡಿಕೆಶಿ ಮಾತನಾಡಿ, ಕುರುಬ ಸಮಾಜದ ಬೆಂಬಲ ನನ್ನ ಮೇಲೆ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಮನವಿ ಮಾಡಿದರು. ಬೀರಲಿಂಗೆಶ್ವರ ದೇವಸ್ತಾನ ಎಲ್ಲಾ ಗ್ರಾಮದಲ್ಲಿಯೂ ಇವೆ. ರೈತರ ಬಾಂದವರು ಬೆಳೆಯನ್ನ ಮೊದಲ ಬಾರಿಗೆ ಬೀರಪ್ಪನಿಗೆ ನೀಡಿ ಫಸಲು ಹೆಚ್ಚಲಿ ಎನ್ನುವ ಪದ್ದತಿ ಮೊದಲಿಂದಲೂ ಬಂದಿದೆ.
ಬೀರಲಿಂಗೆಶ್ವರನ ಕೃಪೆಯಿಂದ ನಾನು ಇಲ್ಲಿಗೆ ಬಂದಿದ್ದೇನೆ. ಬೀರಲಿಂಗೇಶ್ವರನ ಹಾಗೂ ನಿಮ್ಮೆಲ್ಲರ ಕೃಪೆ ನನ್ನ ಮೇಲಿರಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


