ಶಿರಹಟ್ಟಿ-ಮುಂಡರಗಿ ನೂತನ ಬಸ್

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಶಿರಹಟ್ಟಿಯಿಂದ ಗ್ರಾಮೀಣ ಭಾಗಗಳ ಮಾರ್ಗವಾಗಿ ಮುಂಡರಗಿ ನಗರಕ್ಕೆ ಸರ್ಕಾರಿ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ಹೋಬಳಿಯ ಅತ್ತಿಕಟ್ಟಿ ಗ್ರಾಮಸ್ಥರು ವಾಹನಕ್ಕೆ ಪೂಜೆ ಸಲ್ಲಿಸಿದರು.

Advertisement

ಗ್ಯಾರಂಟಿ ಸಮಿತಿ ಸದಸ್ಯರಾದ ರಾಮಣ್ಣ ಎಸ್.ಮೇಗಲಮನಿ ಮಾತನಾಡಿ, ತಾಂಡಾಗಳ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಅನುಕೂಲವಾಗುವಂತೆ ಸ್ಪಂದಿಸಿದ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇವೆ. ಸದರಿ ಬಸ್ ಸೇವೆಯನ್ನು ಆರಂಭಿಸಲು ಗದಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಂಡರಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರಾನಾಳ, ಡಿಪೋ ಅಧಿಕಾರಿಗಳು ಸಹಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿಂಗಪ್ಪ ಮಳನ್ನವರ, ರಾಮಪ್ಪ ಹೈಗರ, ಈರಪ್ಪ ಹಿತ್ತಲಮನಿ, ರಮೇಶ ಫವಾರ, ಸೋಮೇಶ ಕಾರಬಾರಿ, ಗುಡದಪ್ಪ ತಳಗಡೆ, ಅತ್ತಿಕಟ್ಟಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

ಸದರಿ ಬಸ್ ಶಿರಹಟ್ಟಿ ನಗರದಿಂದ 8 ಗಂಟೆಗೆ ಹೊರಟು ಅತ್ತಿಕಟ್ಟಿ, ಡೋಣಿ ತಾಂಡ, ಡೋಣಿ, ಹೊಸಡಂಬಳ, ಡಂಬಳ, ಮೇವುಂಡಿ, ಬರದೂರ ಮೂಲಕ ಮುಂಡರಗಿ ತಲಪುವುದು. ನಂತರ ಸಂಜೆ 4.30ಕ್ಕೆ ಮುಂಡರಗಿಯಿAದ ಹೊರಟು ಅದೇ ಮಾರ್ಗವಾಗಿ ಶಿರಹಟ್ಟಿಗೆ ತಲುಪಲಿದೆ.


Spread the love

LEAVE A REPLY

Please enter your comment!
Please enter your name here