ಶ್ರೀ‌ಮುರಳಿ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್: ಪರಾಕ್ ಟೈಟಲ್ ಪೋಸ್ಟರ್ ರಿಲೀಸ್

0
Spread the love

ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ.

Advertisement

ಬಂತು ಪರಾಕ್ ಟೈಟಲ್ ಪೋಸ್ಟರ್

ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.


Spread the love

LEAVE A REPLY

Please enter your comment!
Please enter your name here