ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಸೊಬಗು ಹಾಗೂ ನಮ್ಮ ಆಚರಣೆಗಳಿಗೆ ಪ್ರಮುಖ್ಯತೆ ನೀಡುವ ವಿಭಿನ್ನ ಪ್ರಯತ್ನದೊಂದಿಗೆ ಹೊಸ ಕನ್ನಡ ಚಲನಚಿತ್ರದ ಚಿತ್ರೀಕರಣ ಆರಂಭಗೊಳ್ಳುತ್ತಿದೆ.
ನಮ್ಮ ಹಳ್ಳಿಗಳ ವಾತಾವರಣ ಹಾಗೂ ನಮ್ಮ ಉತ್ತರ ಕರ್ನಾಟಕದ ಜನ ಜೀವನ ಪದ್ಧತಿಯನ್ನು ವಿಶೇಷವಾಗಿ ಚಿತ್ರೀಕರಿಸಲು ನಿರ್ಧರಿಸಲಾಗಿದ್ದು, ಚಿತ್ರದ ನಿರ್ದೇಶಕ ಎಚ್.ವಾಯ್. ಮಿಶನ್ನವರ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಬೊಂಬಾಟ್, ದರ್ಶನ್ ತೂಗುದೀಪ ಅಭಿನಯದ ಅಯ್ಯ ಹಾಗೂ ಅಶ್ವಿನಿ ನಕ್ಷತ್ರ ಎಂಬ ಧಾರಾವಾಹಿಯಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದವರಾಗಿದ್ದಾರೆ.
ಸದ್ಯ ರವಿಕುಮಾರ ಗುಡಿಸಾಗರರ ಸಹಾಯದಿಂದ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ. ಪ್ರಸಕ್ತ ಸಿನಿಮಾ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗುತ್ತಿದ್ದು, ಮಂಡಳಿಯ ಅಧ್ಯಕ್ಷ ಅನಿಲ ಬಿರಾದರ ಅವರೊಂದಿಗೆ ಮಾತುಕಥೆ ನಡೆಯುತ್ತಿದೆ. ನಟನೆಯಲ್ಲಿ ಆಸಕ್ತಿಯಿರುವವರು 8073225051 ಸಂಖ್ಯೆಗೆ ಕರೆ ಮಾಡಬಹುದು. ಶಶಾಂಕ ಬಾಕಳೆ ಸಹ ನಿರ್ದೇಶಕರಾಗಿ, ರವಿಕುಮಾರ ಗುಡಿಸಾಗರ ಕ್ಯಾಮರಾ ಮನ್ ಆಗಿ ಕೆಲಸ ಮಾಡಲಿದ್ದಾರೆ. ರಾಜಶೇಖರ ಖನ್ನೂರ, ನಾಗರಾಜ ಕಬಾಡಿ, ಪ್ರದೇಪ ಹುಡೇದ, ಗಾಯಕ ಚನ್ನಪ್ಪ ಯಲಿ, ಪ್ರಭುಲಿಂಗ ಶೀಲವಂತರ, ಬಸವರಾಜ ಚಲವಾದಿ ಅವರ ಉಪಸ್ಥಿತಿಯಿದೆ ಎಂದು ಪ್ರಕಟಣೆ ತಿಳಿಸಿದೆ.