ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಣಜಿಗ ಕ್ಷೇಮಾಭಿವೃದ್ಧಿ ಸಂಘಕ್ಕೆ ಈಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಗುರುಪಾದಪ್ಪ ಬೆಲ್ಲದ, ಶಿವಯೋಗಿ ಜಕ್ಕಲಿ (ಅಧ್ಯಕ್ಷ), ಬಸವರಾಜ ವಂಕಲಕುಂಟಿ (ಉಪಾಧ್ಯಕ್ಷ), ನರೇಶ ಜೋಳದ (ಪ್ರಧಾನ ಕಾರ್ಯದರ್ಶಿ), ವೀರೇಶ ಬಂಗಾರಶೆಟ್ರು (ಸಹಕಾರ್ಯದರ್ಶಿ), ಬಸಪಪ್ಪ ಸಂಗಳದ (ಖಜಾಂಚಿ), ಸಲಹಾ ಸಮಿತಿಯ ಸದಸ್ಯರಾಗಿ ಸಿ.ವಿ. ವಂಕಲಕುಂಟಿ, ಶರಣಪ್ಪ ಹಂಜಿ, ಕುಬೇರಪ್ಪ ನಾಶಿಪುಡಿ, ವಿಜಯಕುಮಾರ ಅಂಗಡಿ ಮತ್ತು ಬಸವರಾಜ ಹಂಜಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಶಿವಯೋಗಿ ಜಕ್ಕಲಿ, ಸಂಘವು ದಶಮಾನೋತ್ಸವವನ್ನು ಆಚರಿಸಿಕೊಂಡಿದ್ದು, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಸಂಘದ ಪ್ರತಿಯೊಬ್ಬ ಸದಸ್ಯನ ಕುಂದುಕೊರತೆಗಳಿಗೆ ದನಿಯಾಗಿ ನೂತನ ಪದಾಧಿಕಾರಿಗಳು ಕಾರ್ಯ ನಿರ್ವಹಿಸುತ್ತೇವೆ. ಸಲಹಾ ಸಮಿತಿಯ ಹಿರಿಯರು ನಮಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.