ವಿಜಯಸಾಕ್ಷಿ ಸುದ್ದಿ, ರೋಣ : ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಮಾಜ ಹಾಗೂ ಸಮುದಾಯ ಪ್ರಗತಿ ಹೊಂದಲು ಸಾಧ್ಯ ಎಂದು ಪುರಸಭೆಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಅಂಜುಮನ್ ಎ ಇಸ್ಲಾಂ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಿದ ನೂತನ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂರು ಕೂಡ ಇತ್ತೀಚಿಗೆ ಶಿಕ್ಷಣದತ್ತ ಹೆಚ್ಚಿನ ಒಲುವು ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸಮಾಜ ಅಭಿವೃದ್ಧಿಯತ್ತ ಸಾಗಬೇಕಾದರೆ ಶಿಕ್ಷಣ ಸಂಸ್ಥೆಗಳು ಇರಬೇಕು. ಹಾಗೆ ಅಲ್ಲಿ ಕೂಡ ಗುಣ ಮಟ್ಟದ ಅಕ್ಷರ ಜ್ಞಾನ ಮಕ್ಕಳಿಗೆ ದೊರಕಬೇಕು. ರೋಣದ ಮುಸ್ಲಿಂ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಮತ್ತೆ ಎಲ್ಕೆಜಿಯಿಂದ ಪಬ್ಲಿಕ್ ಸ್ಕೂಲ್ ಆರಂಭಿಸುತ್ತಿರುವುದು ಸ್ವಾಗತರ್ಹವಾಗಿದೆ ಎಂದರು.
ಸಾನ್ನಿಧ್ಯವನ್ನು ಹಜರತ್ ಸುಲೇಮಾನ್ ಶಾವಲಿ ಅಜ್ಜನವರು ವಹಿಸಿದ್ದರು. ಹಾಜಿ ಎ.ಎಸ್. ಖತೀಬ ಖುರಾನ್ ಪಠಿಸಿದರು. ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಭಾವಾಸಾಬ ಬೆಟಗೇರಿ ವಹಿಸಿದ್ದರು.
ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಯೂಸುಪ್ ಇಟಗಿ, ಮುನೀರ ಅಹ್ಮದ್, ಮಹಮ್ಮದ ಸಾಧೀಕ, ಅಯುಬ್ಖಾನ್, ಮಲೀಕ್ ಯಲಿಗಾರ, ಇನಾಯತ್ ತರಪದಾರ, ಎ.ಐ. ಶೇಖ ಸೇರಿದಂತೆ ಸಮಾಜದ ಮುಖಂಡರು, ಅಂಜುಮನ್ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.



