ಬೆಂಗಳೂರು:- ಕ್ರಿಸ್ಮಸ್, ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನಲ್ಲಿ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ.
ಚಳಿಗಾಲದಲ್ಲಿ ಮೊಟ್ಟೆ, ಚಿಕನ್, ಫಿಶ್ ಸೇವಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಮೊಟ್ಟೆಯಿಂದ ತಯಾರಿಸಿದ ಆಹಾರಗಳನ್ನು ಹೆಚ್ಚಿನ ಜನ ಸೇವಿಸುತ್ತಾರೆ. ಜೊತೆಗೆ ಕ್ರಿಸ್ಮಸ್, ಹೊಸವರ್ಷದ ಹಬ್ಬ ಇರುವುದರಿಂದ ಕೇಕ್ ಉತ್ಪಾದನೆಗಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಕಡಿಮೆಯಾಗಿದ್ದು, ಮೊಟ್ಟೆಯ ದರವೂ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮೊಟ್ಟೆ ಪೂರೈಕೆ ಕಡಿಮೆಯಾಗಿದೆ. ಜೊತೆಗೆ ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ. ಸದ್ಯ ಪ್ರತಿನಿತ್ಯ ಬೆಂಗಳೂರಲ್ಲಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಆದರೆ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 5 ರೂಪಾಯಿ ಇದ್ದ ಮೊಟ್ಟೆ ಬೆಲೆ ಇದೀಗ ದುಬಾರಿಯಾಗಿದ್ದು, ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ಆಗಿದೆ.


