ಕೋಲಾರ:- ಗೋಣಿಚೀಲದಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದ್ದು, ಸ್ಥಳೀಯರಿಂದ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಜರುಗಿದೆ.
Advertisement
ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಮಗುವಿನ ಅಳುವಿನ ಧ್ವನಿ ಕೇಳಿ ಹತ್ತಿರ ಹೋಗಿ ನೋಡಿದಾಗ ಚೀಲದಲ್ಲಿ ಸಿಕ್ಕಿರುವ ಶಿಶುವನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ನಗರದ ಪೊಲೀಸರು, ಪರಿಶೀಲನೆ ನಡೆಸಿ ನವಜಾತ ಮಗುವನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಆಸ್ಪತ್ರೆ ಮಕ್ಕಳ ತಜ್ಞ. ಡಾ. ಹರೀಶ್ ಶಿಶುವಿನ ಆರೋಗ್ಯ ತಪಾಸಣೆ ನಡೆಸಿ, ಮಗುವಿನ ತೂಕ 2 ಕೆಜಿ 150 ಗ್ರಾಂ ಆಗಿದ್ದು, ಮಗು ಆರೋಗ್ಯಕರವಾಗಿದೆ ಎಂದು ತಿಳಿಸಿದರು.