HomeKarnataka Newsನೆಲಮಂಗಲ: ಕಸದ ರಾಶಿಯಲ್ಲಿ ಗಂಡು ನವಜಾತ ಶಿಶು ಪತ್ತೆ.. ಪೊಲೀಸರ ಸಮಯ ಪ್ರಜ್ಞೆಯಿಂದ ರಕ್ಷಣೆ!

ನೆಲಮಂಗಲ: ಕಸದ ರಾಶಿಯಲ್ಲಿ ಗಂಡು ನವಜಾತ ಶಿಶು ಪತ್ತೆ.. ಪೊಲೀಸರ ಸಮಯ ಪ್ರಜ್ಞೆಯಿಂದ ರಕ್ಷಣೆ!

For Dai;y Updates Join Our whatsapp Group

Spread the love

ನೆಲಮಂಗಲ: ಕಸದ ರಾಶಿಯಲ್ಲಿ ನವಜಾತ ಗಂಡು ಶಿಶುವೊಂದನ್ನು ದುರುಳರು ಬಿಸಾಡಿ ಹೋಗಿರುವ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಪೊಲೀಸರ ಸಮಯ ಪ್ರಜ್ಞೆ ಯಿಂದ ನವಜಾತ ಗಂಡು ಶಿಶುವನ್ನು ರಕ್ಷಿಸಲಾಗಿದೆ. ಮಾದನಾಯಕನಹಳ್ಳಿ ರಸ್ತೆಪಕ್ಕದಲ್ಲಿದ್ದ ಕಸದ ರಾಶಿಯಲ್ಲಿ ಯಾರೋ ದುರುಳರು, ನವಜಾತ ಶಿಶುವನ್ನು ಬಿಸಾಡಿ ಹೋಗಿದ್ದಾರೆ. ಮಗು ಅಳುತ್ತಿದ್ದದ್ದನ್ನ ಗಮನಿಸಿದ ಸ್ಥಳೀಯರು, ಕೂಡಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಇನ್ಸ್ಪೆಕ್ಟರ್ ಮುರುಳಿ ನೇತೃತ್ವದ ಟೀಂ ಸ್ಥಳಕ್ಕೆ ಧಾವಿಸಿ ಮಗುವನ್ನ ರಕ್ಷಿಸಿದರು. ಬಳಿಕ ಆ ಮಗುವನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಹಾರ ಇಲ್ಲದೆ ನರಳಾಡುತ್ತಿದ್ದ ಮಗುವಿಗೆ ಆರೈಕೆ ಮಾಡಲಾಗುತ್ತಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವಜಾತ ಶಿಶುವನ್ನ ಬಿಸಾಡಿದ್ದವರ ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!