ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಿಕೋಲಸ್ ಪೂರನ್..!

0
Spread the love

ಎಲ್ಲ ಮಾದರಿಯ ಅಂತಾರಾಷ್ಚ್ರೀಯ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ನಿಕೋಲಸ್ ಪೂರನ್ ನಿವೃತ್ತಿ ಹೇಳಿದ್ದಾರೆ. ಐಪಿಎಲ್ ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು ಪ್ರಸ್ತುತ ಲಖನೌ ಸೂಪರ್ ಜೈಂಟ್ಸ್ ಆಟಗಾರರಾಗಿದ್ದಾರೆ.

Advertisement

ದುಬೈ ಕ್ರಿಕೆಟ್ ಲೀಗ್ ನಲ್ಲೂ ಸಕ್ರಿಯವಾಗಿರುವ ಅವರು ಎಂಐ ಎಮಿರೇಟ್ಸ್ ಆಟಗಾರರಾಗಿದ್ದಾರೆ. ಮಾತ್ರವಲ್ಲದೆ ನಾರ್ಥನ್ ಸೂಪರ್ ಚಾರ್ಜರ್ಸ್ , ಟ್ರಿಂಬಾಗೋ ನೈಟ್ ರೈಡರ್ಸ್, ಟ್ರನಿಡಾಡ್ ಆ್ಯಂಡ್ ಟೊಬಾಗೊ ಸೇರಿದಂತೆ ಹತ್ತಾರು ತಂಡಗಳಲ್ಲಿ ಆಡಿರುವ ಅನುಭವಗಳನ್ನು ಹೊಂದಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ಹಂಚಿಕೊಂಡಿರುವ ನಿಕೋಲಸ್ ಪೂರನ್, ಬಹಳ ಯೋಚಿಸಿದ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾವು ಪ್ರೀತಿಸುವ ಈ ಆಟ ನಮಗೆ ತುಂಬಾ ನೀಡಿದೆ ಮತ್ತು ಮುಂದೆಯೂ ನೀಡುತ್ತದೆ.

ಸಂತೋಷ, ಉದ್ದೇಶ, ಅನೇಕ ನೆನಪುಗಳು ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಅವಕಾಶ. ಮೆರೂನ್ ಜೆರ್ಸಿ ಧರಿಸುವುದು, ರಾಷ್ಟ್ರಗೀತೆಗಾಗಿ ನಿಲ್ಲುವುದು ಮತ್ತು ನೀವು ಪ್ರತಿ ಬಾರಿ ಮೈದಾನಕ್ಕೆ ಕಾಲಿಡುವಾಗ ಎಲ್ಲವನ್ನೂ ನೀಡುವುದು… ಇವುಗಳನ್ನು ಪದಗಳಲ್ಲಿ ಹೇಳುವುದು ಕಷ್ಟ.

ಇವೆಲ್ಲದರ ನಡುವೆ ನಾಯಕನಾಗಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುವ ಗೌರವ ಕೂಡ ಸಿಕ್ಕಿದೆ. ಅಭಿಮಾನಿಗಳ ಅಚಲ ಪ್ರೀತಿಗೆ ಧನ್ಯವಾದಗಳು. ನೀವು ಕಷ್ಟದ ಕ್ಷಣಗಳಲ್ಲಿ ನನ್ನನ್ನು ಬೆಂಬಲಿಸಿದ್ದೀರಿ ಮತ್ತು ಉತ್ತಮ ಕ್ಷಣಗಳನ್ನು ಅಪ್ರತಿಮ ಉತ್ಸಾಹದಿಂದ ಆಚರಿಸಿದ್ದೀರಿ. ನನ್ನೊಂದಿಗೆ ಈ ಪ್ರಯಾಣವನ್ನು ನಡೆಸಿದ್ದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು ಮತ್ತು ತಂಡದ ಸದಸ್ಯರಿಗೆ ಧನ್ಯವಾದಗಳು ಎಂದು ನಿಕೋಲಸ್ ಪೂರನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here