ಚಿಕನ್‌ ಖರೀದಿಗೆ ಬಂದಿದ್ದ ನೈಜೀರಿಯಾ ಪ್ರಜೆ ಕೊಲೆ: ಸಾವಿಗೆ ಕಾರಣವಾಯ್ತು ಕ್ಷುಲ್ಲಕ ಜಗಳ!

0
Spread the love

ಬೆಂಗಳೂರು:- ಚಿಕನ್‌ ಖರೀದಿಗೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ 40 ವರ್ಷ ವಯಸ್ಸಿನ ಅಡಿಯಾಕೋ ಮಸಾಲಿಯೋ ಎಂಬಾತನನ್ನ ಕೊಲೆ‌ ಮಾಡಿರೋ ಘಟನೆ ವರದಿಯಾಗಿದೆ.

ಬುಧವಾರ ಬಾಗಲೂರು ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿಗೆ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಬಂದಿದ್ದ ನೈಜೀರಿಯಾ ಪ್ರಜೆ ಅಡಿಯಾಕೋ ಮಸಾಲಿಯೋ ಚಿಕನ್ ಸೆಂಟರ್ ವೊಂದರಲ್ಲಿ ಚಿಕನ್ ಖರೀದಿಗೆ ಹೋಗಿದ್ದ. ಈ ವೇಳೆ ಆತನ ದೈತ್ಯ ದೇಹ, ಆತನ ಓಡಾಟ ನೋಡಿ ಸ್ಥಳೀಯರು ಅನುಮಾಸ್ಪದವಾಗಿ ಓಡಾಡ್ತಿದ್ದಾನೆ ಅಂತಾ ತಡೆದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಸ್ಥಳೀಯರಿಗೂ ದೈತ್ಯ ಪ್ರಜೆಗೂ ಗಲಾಟೆ ಶುರುವಾಗಿದೆ. ಗಲಾಟೆ ನಡುವೆ ಯಾಸೀನ್ ಖಾನ್ ಎಂಬಾತನಿಗೆ ಅಡಿಯಾಕೋ ಮಸಾಲಿಯೋ ಒಂದೆರಡೇಟು ಹೊಡೆದಿದ್ದ ಅದಕ್ಕೆ ಕೋಪಗೊಂಡಿದ್ದ ಯಾಸೀನ್ ಖಾನ್ ಅಲ್ಲಿಯೇ ಇದ್ದ ಮರದ ತುಂಡು ಒಂದನ್ನ ಕೈಗೆತ್ತಿಕೊಂಡವನೇ ಸೀದಾ ಅಡಿಯಾಕೋ ತಲೆಗೆ ಬಿಟ್ಟಿದ್ದಾನೆ. ನಂತರ ಗಲಾಟೆ ಜೋರಾಗಿದೆ, ಗಲಾಟೆ ನಡುವೆ ಬೆಳ್ಳಹಳ್ಳಿ ಬಂಡೆ ಬಳಿ ಹೋಗಿದ್ದ ಅಡಿಯಾಕೋ ಸುಸ್ಥಾಗಿ ಬಿದ್ದು ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.


Spread the love

LEAVE A REPLY

Please enter your comment!
Please enter your name here