ಮೈಸೂರು: ಬಂಡೀಪುರದಲ್ಲಿ ರಾತ್ರಿಯ ವೇಳೆ ವಾಹನಗಳ ಸಂಚಾರ ನಿಷೇಧ ಮುಂದುವರೆಯಬೇಕು ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಂಡೀಪುರದಲ್ಲಿ ರಾತ್ರಿಯ ವೇಳೆ ವಾಹನಗಳ ಸಂಚಾರ ನಿಷೇಧ ಮುಂದುವರೆಯಬೇಕು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವಿದ್ದು,
ಯಾವುದೇ ಕಾರಣಕ್ಕೂ ತೆರವಾಗಬಾರದು. ಈಗಾಗಲೇ ರಾತ್ರಿ ಒಂಬತ್ತು ಗಂಟೆಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯವರೆಗೂ ಅವಕಾಶವಿದ್ದ ಮೇಲೆ ರಾತ್ರಿ ವೇಳೆ ಏಕೆ ಅವಕಾಶ ಕೊಡಬೇಕು.
ರಾತ್ರಿ ಒಂಬತ್ತುಗಂಟೆ ಆದ ಮೆಲೆ ಯಾರು ಓಡಾಡುವುದಿಲ್ಲ. ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಅರಣ್ಯ ಮತ್ತು ಪ್ರಾಣಿ ಸಂಕುಲಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ತೆರವು ಮಾಡಬಾರದು. ಈಗ ಇರುವ ನಿಷೇಧ ಮುಂದುವರೆಯಬೇಕು ಎಂದು ಹೇಳಿದರು.