Vijayapura: ನಿಗಿ ನಿಗಿ ಬೆಂಕಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ದೇವರಿಗೆ ನಮಿಸಿದ ವ್ಯಕ್ತಿ!

0
Spread the love

ವಿಜಯಪುರ:- ಭಕ್ತನೋರ್ವ ನಿಗಿ ನಿಗಿ ಬೆಂಕಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ದೇವರಿಗೆ ನಮಿಸಿದ ಘಟನೆ ಜರುಗಿದೆ.

Advertisement

ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕೆಂಡ ಹಾಯುವಾಗ ಇಲ್ಲೊಬ್ಬ ವ್ಯಕ್ತಿ ನಿಗಿ ನಿಗಿ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಂಡು ದೇವರಿಗೆ ಶಿರಬಾಗಿ ನಮಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮದರಿ ಗ್ರಾಮದಲ್ಲಿ ನಡೆದಿದೆ. ಮೊಹರಂ ಹಬ್ಬದ ನಿಮಿತ್ತ ಆಚರಣೆ ಮಾಡಲಾಗುವ ಗಂಧದ ರಾತ್ರಿ ಹಬ್ಬದಲ್ಲಿ ವಿಚಿತ್ರ ಘಟನೆ ಕಂಡುಬಂದಿದೆ. ಮೊಹರಂ ನಿಮಿತ್ತ ಬೆಂಕಿ ಹಾಯೋದು ವಾಡಿಕೆಯಿದೆ.

ನಮ್ಮ ರಾಜ್ಯ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಮೊಹರಂ ಹಬ್ಬದ ನಿಮಿತ್ತ ಬೆಂಕಿ ಕೆಂಡವನ್ನು ಹಾಯುತ್ತಾರೆ. ಆದರೆ, ಇಲ್ಲೊಬ್ಬ ಭಕ್ತ ಬೆಂಕಿ ಕೆಂಡದಲ್ಲಿಯೇ ಕಂಬಳಿ ಹಾಸಿ ಕುಳಿತು ಅಲ್ಲಿಯೇ ಶಿರಬಾಗಿ ದೇವರಿಗೆ ನಮಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here