ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು: ಸಂಸದ ಯದುವೀರ್

0
Spread the love

ರಾಮನಗರ: ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು  ಸಂಸದ ಯದುವೀರ್ ಮನವಿ ಮಾಡಿದ್ದಾರೆ. ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಅರಸು ಸಮುದಾಯ ಧರ್ಮದ ರಕ್ಷಣೆಗೆ ಇರೋ ಸಮುದಾಯ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ.

Advertisement

ಧರ್ಮದ ರಕ್ಷಣೆ, ದೇಶದ ಪರಂಪರೆ ಉಳಿಸಲು ಎನ್‌ಡಿಎ ಹೋರಾಟ ಮಾಡುತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಮಾಡಿ, ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಭಾರತದ ಪರಂಪರೆ ಉಳಿಸಲು ಎನ್‌ಡಿಎ ಹೋರಾಡುತ್ತಿದೆ. ಹಾಗಾಗಿ ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here