ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಕಾಮಗಾರಿಗಳಲ್ಲಿ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದ್ದು, ಕೂಲಿಕಾರರು ಈ ಬಗ್ಗೆ ಜಾಗೃತಿ ವಹಿಸುವಂತೆ ತಾ.ಪಂ ಸಹಾಯಕ ನಿರ್ದೇಶಕ (ಉಖಾ) ಕುಮಾರ ಪೂಜಾರ ಹೇಳಿದರು.

Advertisement

ಸೋಮವಾರ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಾರಂಭವಾಗಿರುವ ಸಮುದಾಯ ಬದು ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಬೇಸಿಗೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸದ ಅಭಾವವಿರುತ್ತದೆ. ಇದರ ಪರಿಹಾರಕ್ಕಾಗಿ ಉದ್ಯೋಗ ಖಾತ್ರಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದರ ಸದ್ಬಳಕೆ ಎಲ್ಲ ಗ್ರಾಮೀಣರ ಕೈಯಲ್ಲಿ ಇದೆ ಎಂದರು.

2025ರ ಎಪ್ರಿಲ್‌ನಿಂದ ಕೂಲಿ ಮೊತ್ತ ಪರಿಷ್ಕರಿಸಲಾಗಿದ್ದು, ದಿನಕ್ಕೆ 370 ರೂ ಕೂಲಿ ಸಿಗಲಿದೆ. ಹಾಜರಾತಿಯಲ್ಲಿ ಎನ್‌ಎಂಎಂಎಸ್ ಆ್ಯಪ್ ಜಾರಿಗೆ ತಂದಿದ್ದು, ಎರಡು ಸಾರಿ ಹಾಜರಾತಿ ಕಡ್ಡಾಯವಾಗಿದೆ. ಅಳತೆಗನುಗುಣವಾಗಿ ಕೂಲಿ ಮೊತ್ತ ಪಾವತಿ ಮಾಡಲಾಗುತ್ತದೆ. ಬಿಎಫ್‌ಟಿ, ಜಿಕೆಎಂ ಮತ್ತು ಕಾಯಕ ಬಂದುಗಳು ಮಹಿಳಾ ಪಾಲ್ಗೊಳ್ಳುವಿಕೆ ಬಗ್ಗೆ ಹೆಚ್ಚು ಗಮನವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಎಸ್‌ಡಿಎ ಸಣ್ಣೀರಪ್ಪ ಪೂಜಾರ, ಟಿಎಇ ಪ್ರದೀಪ ನರೇಗಲ್ಲ, ಡಿಇಒ ಮೌಲಾಸಾಬ್ ಚಲ್ಲಮರದ, ಬಿಎಫ್‌ಟಿ ಸೋಮಶೇಖರ ತುರಬಿನ್, ಶಿವಾನಂದ ಹುಬ್ಬಳ್ಳಿ, ಇಮಾಮಸಾಬ್ ಖಾನಾಪುರ, ಬಸವರಾಜ ಮ್ಯಾಗೇರಿ, ಹುಸೇನಸಾಬ್ ಚಿಕ್ಕೊಪ್ಪ ಸೇರಿದಂತೆ ಕೂಲಿ ಕಾರ್ಮಿಕರು ಇದ್ದರು.


Spread the love

LEAVE A REPLY

Please enter your comment!
Please enter your name here