ಬೆಂಗಳೂರು: ರಾಜ್ಯದಲ್ಲಿ ಯಾವುದೇ BPL ಹಾಗೂ APL ಕಾರ್ಡ್ʼ ಗಳನ್ನು ರದ್ದು ಮಾಡಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನರ್ಹರ ಕಾರ್ಡ್ ಪತ್ತೆಗೆ ಅಗತ್ಯ ಕ್ರಮ ಜರುಗಿಸಲಾಗಿದೆ.
ಸಿಎಂ ಆದೇಶದಂತೆ ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಲಾಗಿದೆ ಅಷ್ಟೇ. ಅದಲ್ಲದೆ ರಾಜ್ಯದಲ್ಲಿ ಯಾವುದೇ BPL ಹಾಗೂ APL ಕಾರ್ಡ್ʼ ಗಳನ್ನು ರದ್ದು ಮಾಡಿಲ್ಲ ಎಂದು ಹೇಳಿದರು.ಇನ್ನೂ ಬಿಪಿಎಲ್ ಗೆ ಅರ್ಹರಿದ್ದು ಅಂತಹವರನ್ನ ಎಪಿಎಲ್ ಗೆ ಸೇರಿಸಿದ ಕಾರ್ಡ್ ಗಳನ್ನ ಮರು ಸ್ಥಾಪನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಿಪಿಎಲ್ ಮಾನದಂಡ ಮೀರಿದ ಒಂದು ಲಕ್ಷದ ಐನೂರು ಕಾರ್ಡ್ ಗಳು ಮಾತ್ರ ರದ್ದಾಗಿವೆ. ಬಿಪಿಎಲ್ ಒಂದು ಕೋಟಿ ಹನ್ನೆರಡು ಲಕ್ಷ ಕಾರ್ಡ್ ಗಳು ಚಾಲ್ತಿಯಲ್ಲಿವೆ. ಒಂದುವಾರದಲ್ಲಿ ಬಿಪಿಎಲ್ ಮಾನ್ಯತೆ ಪಡೆದವರಿಗೆ ಮತ್ತೆ ಹಿಂದಿನಂತೆಯೆ ಸೌಲಭ್ಯ ಸಿಗಲಿದೆ. ಲಾಗಿನ್ ಪ್ರಕ್ರಿಯೆಯನ್ನ ಮುಗಿಸಿ ಶೀಘ್ರವೇ ಅವರಿಗೂ ಬಿಪಿಎಲ್ ದೊರಕುವಂತೆ ಮಾಡಿಕೊಡುತ್ತೇವೆ ಎಂದು ಹೇಳಿದರು.