ಬೆಳಗಾವಿ: ಲಿಂಗಾಯತರ ಮೇಲೆ ಹಲ್ಲೆ ನಡೆಸುವ ಹೀನ ಕೃತ್ಯವನ್ನು ಹಿಂದೆ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡೋದೊಂದು ಮಾಡೋದೊಂದು, ತಮ್ಮ ಭಾಷಣಗಳಲ್ಲಿ ಬಸವಣ್ಣನವರ ವಚನಗಳು ಆದರೆ ಪ್ರತಿಭಟನೆ ನಡೆಸುವ ಬಸವಣ್ಣನ ಅನುಯಾಯಿಗಳ ಮೇಲೆ ಲಾಠಿಚಾರ್ಜ್ ಎಂದು ಹೇಳಿದ್ದಾರೆ.
ಇನ್ನೂ ಲಿಂಗಾಯತರ ಮೇಲೆ ಹಲ್ಲೆ ನಡೆಸುವ ಹೀನ ಕೃತ್ಯವನ್ನು ಹಿಂದೆ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ, 1975 ರಲ್ಲಿ ಇಡೀ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಉಂಟಾದ ಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ, ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಲಿಂಗಾಯತ ಹೋರಾಟ ನಡೆದಿತ್ತು, ಅದರೆ ತಾವು ಅವರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದೆವು ಎಂದು ಹೇಳಿದರು.



