ನವದೆಹಲಿ:- ಓಯೋ ಹೋಟೆಲ್ ಬುಕ್ಕಿಂಗ್ ಕಂಪನಿ ನೂತನ ನಿಯಮ ಜಾರಿಗೆ ತಂದಿದ್ದು, ಮದುವೆ ಆಗದ ಜೋಡಿಗೆ ಹೋಟೆಲ್ ಗೆ ನಿರ್ಬಂಧ ವಿಧಿಸಿದೆ.
ಕಂಪನಿ ಚೆಕ್ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಇನ್ಮುಂದೆ ಅವಿವಾಹಿತ ಪುರುಷ – ಮಹಿಳಾ ಜೋಡಿಗೆ ಹೋಟೆಲ್‌ಗಳಲ್ಲಿ ಅನುಮತಿ ಇರುವುದಿಲ್ಲ ಎಂದು ಕಂಪನಿ ಹೇಳಿದೆ.
ಯುವತಿ ಮತ್ತು ಯುವಕರು ಸೇರಿದಂತೆ ಬಹುತೇಕರು ತಾವು ಉಳಿದುಕೊಳ್ಳಲು ‘ಓಯೋ ರೂಂ’ ಬುಕ್ ಮಾಡುತ್ತಾರೆ, ಅಲ್ಲದೆ ‘ಓಯೋ ರೂಂ’ ಬೇಕೆ ಬೇಕು ಅಂತಾರೆ. ಆದ್ರೆ, ಇದೀಗ ಟ್ರಾವೆಲ್ ಬುಕಿಂಗ್ ಕಂಪನಿ ಓಯೋ , ಚೆಕ್-ಇನ್ ನೀತಿ ನಿಯಮಗಳನ್ನು ಪರಿಷ್ಕರಿಸಿದೆ.
ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ. ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.
ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.