ಬೆಂಗಳೂರು: ಕರ್ನಾಟಕ ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೊಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ.
Advertisement
ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೊಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೇ ಇರೋ ರೀತಿ ಬಂದ್ ಮಾಡೋರು ಸಹಕಾರ ಕೊಡ್ತಾರೆ. ಹೋರಾಟಗಾರರಿಗೆ ಮನವಿ ಮಾಡ್ತೀನಿ.
ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ ಪರೀಕ್ಷೆ ಅನ್ನೋದು ಮಕ್ಕಳಿಗೆ ಮುಖ್ಯ. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ ಎಂದಿದ್ದಾರೆ.