ಯಾವ ರೈತನಿಗೂ ತೊಂದರೆಯಾಗಲ್ಲ. ಇಲ್ಲಿ ಎತ್ತಿಕಟ್ಟಿ ರಾಜಕೀಯ ಮಾಡಲಾಗುತ್ತಿದೆ: ಸಚಿವ ಜಮೀರ್

0
Spread the love

ಹುಬ್ಬಳ್ಳಿ: ಯಾವ ರೈತನಿಗೂ ತೊಂದರೆಯಾಗಲ್ಲ. ಇಲ್ಲಿ ಎತ್ತಿಕಟ್ಟಿ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ‌ಖಾನ್ ವಿಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರ ಆಸ್ತಿಯನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಅನ್ನದಾತರ ಆಸ್ತಿಯನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ.

Advertisement

ಕಾನೂನು ಇದೆ ಅಲ್ಲವಾ. ಯಾರದೋ ಆಸ್ತಿಯನ್ನು ಇನ್ನಾರೋ ತೆಗೆದುಕೊಳ್ಳಲು ಸಾಧ್ಯವಾ? ನಾನು ಸರ್ಕಾರದಲ್ಲಿ ಮಂತ್ರಿ ಆಗಿದ್ದಿರಬಹುದು. ಹಾಗಂತ ನಾನು ಹೇಳಿದ ತಕ್ಷಣ, ಸೂಚನೆ ಕೊಟ್ಟಾಕ್ಷಣ ಅಧಿಕಾರಿಗಳು ನಿಮ್ಮ ಆಸ್ತಿಯನ್ನು ವಕ್ಫ್​ ಹೆಸರಲ್ಲಿ ಮಾಡಲು ಸಾಧ್ಯವಾ? ಅದಕ್ಕೆ ಎಂದು ಕಾನೂನು ಇಲ್ಲವಾ?ಎಂದು ಸಚಿವ ಜಮೀರ್​ ಪ್ರಶ್ನಿಸಿದರು.

ಇನ್ನೂ ನಾನು ಮಾಧ್ಯಮದ ಮುಖಾಂತರ ರೈತರಿಗೆ ವಕ್ಫ್ ಅಧ್ಯಕ್ಷನಾಗಿ ಆಶ್ವಾಸನೆ ನೀಡುತ್ತಿದ್ದೇನೆ. ಯಾವ ರೈತನಿಗೂ ತೊಂದರೆಯಾಗಲ್ಲ. ಇಲ್ಲಿ ಎತ್ತಿಕಟ್ಟಿ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು. ಭಾರತದಲ್ಲಿ ಇರುವವರೆಲ್ಲಾ ಭಾರತೀಯರು ಅಷ್ಟೇ. ಜೋಶಿ ಅವರೇ ರಾಜಕೀಯಕ್ಕೆ ಬಂದ ಮೇಲೆ ಜಾತಿ ಮಾಡಬಾರದು. ಮಾಡೋವುದಿದ್ದರೆ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಎಂದು  ಹೇಳಿದರು.


Spread the love

LEAVE A REPLY

Please enter your comment!
Please enter your name here