ತುಮಕೂರು: ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನ ಸಮುದಾಯಕ್ಕೆ ಬೇಕಾದ ಆಡಳಿತವನ್ನ ಕೊಡುತ್ತೇವೆ ಅಂತ ಹೇಳಿದ್ದೇವೆ.
ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮಗಳನ್ನ ಹಾಕಿಕೊಳುತ್ತೇವೆ ಅಂತ ಹೇಳಿದ್ದೇವೆ. ಐದು ಗ್ಯಾರಂಟಿಗಳನ್ನ ಚುನಾವಣೆಗೂ ಮೊದಲೇ ಪ್ರಕಟಣೆ ಮಾಡಿದ್ದೇವೆ. ಅದರ ಮೂಲ ಉದ್ದೇಶ, ಬಡತನ ರೇಖೆಗಿಂತ ಕೆಳಗೆ ಇದ್ದಾರೆ ಅವರ ಬಡತನ ನಿರ್ಮೂಲನೆ ಮಾಡುವ ಪ್ರಯತ್ನ ಅಷ್ಟೇ.
ಆರ್ಥಿಕ ಸಹಾಯ ಕೆಲವು ಸವಲತ್ತುಗಳನ್ನ ಕೊಡುವ ಮೂಲಕ ಬಡತನದ ಮೇಲೆತ್ತುವ ಕೆಲಸ ಮಾಡಿದ್ದೇವೆ. ಸಾವಿರಾರು ರೂಪಾಯಿ ಹಣವನ್ನ ಅವರಿಗಾಗಿ ಈಗಾಗಲೇ ಕೊಟ್ಟಿದ್ದೇವೆ. ಟೀಕೆ ಟಿಪ್ಪಣಿಗಳು ಬಂದಿರಬಹುದು. ವಿರೋಧ ಪಕ್ಷದ ನಾಯಕರು ಬಜೆಟ್ನಲ್ಲಿರುವ ಹಣವನ್ನ ಪೋಲ್ ಮಾಡ್ತಿದ್ದಾರೆ ಎಂದು ಟೀಕೆ ಮಾಡ್ತಿರಬಹದು ಹಲವು ವ್ಯಾಖ್ಯಾನ ಮಾಡಿರಬಹುದು. ಆದರೆ ನಮ ಉದ್ದೇಶ ಆ ಬಡ ಜನರನ್ನ ಮೇಲೆತ್ತುವ ಉದ್ದೇಶ ಅಷ್ಟೇ ಎಂದರು.