ಹಾಸನ: ಜೆಡಿಎಸ್ನ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹಾಸನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ H.D.ಕುಮಾರಸ್ವಾಮಿ ಹೇಳಿದರು. ನಿನ್ನೆ ಸಭೆಯಲ್ಲಿ 19 ಶಾಸಕರ ಪೈಕಿ 18 ಶಾಸಕರು ಭಾಗಿಯಾಗಿದ್ದರು.
Advertisement
ಶಾಸಕ ಶರಣಗೌಡ ಕಂದಕೂರ್ ಭಾಗಿಯಾಗಿರಲಿಲ್ಲ. ಕಂದಕೂರ್ ನಮ್ಮ ಮನೆಯ ಮಗ, ಅವರಲ್ಲಿ ಸ್ವಲ್ಪ ಗೊಂದಲ ಇದೆ. ಅವರನ್ನು ಕರೆದು ಮಾತನಾಡ್ತೇನೆ. ಶಾಸಕರು ಪಕ್ಷ ಬಿಟ್ಟು ಹೋಗ್ತಾರೆಂದು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ನಮ್ಮ ಶಾಸಕರ ಮೇಲೆ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಿ ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಎಂದರು.