BJP ಎಷ್ಟೇ ಟೀಕೆ ಮಾಡಿದ್ರು ನಮ್ಮ ಸರ್ಕಾರ ಮತ್ತಷ್ಟು ಸದೃಢವಾಗುತ್ತದೆ: ಸಚಿವ ಡಾ.ಎಂ.ಸಿ.ಸುಧಾಕರ್

0
Spread the love

ಬೆಳಗಾವಿ: ಬಿಜೆಪಿಯವರು ಎಷ್ಟೇ ಟೀಕೆ ಮಾಡಿದ್ರು ನಮ್ಮ ಸರ್ಕಾರ ಮತ್ತಷ್ಟು ಸದೃಢವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷವಾಗಿ ಏನಾದರೂ ಬಾಯಿ ಬಡಿದುಕೊಳ್ಳಬೇಕು ಅಲ್ಲವೇ?. ಬಾಯಿ ಚಪಲಕ್ಕೆ ಮಾತಾಡುತ್ತಿದ್ದಾರೆ.

Advertisement

ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ ಎಂದರು. ಈಗ ಡಿಸೆಂಬರ್ ಅಂತಿದ್ದಾರೆ. ಆದರೆ, ವಸ್ತುಸ್ಥಿತಿ ಬೇರೆನೇ ಇದೆ. ಇತ್ತಿಚೆಗೆ ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯ ಗಳಿಸಿದ್ದೇವೆ. ಹಾಗಾಗಿ, ಬಿಜೆಪಿಯವರು ಎಷ್ಟೇ ಟೀಕೆ ಮಾಡಲಿ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಲಿ. ನಮ್ಮ ಸರ್ಕಾರ ಮತ್ತಷ್ಟು ಸದೃಢವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬಗ್ಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಬಲಿಷ್ಠರಾಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.


Spread the love

LEAVE A REPLY

Please enter your comment!
Please enter your name here