ವಿಜಯಪುರ: ಜನರು ಏನಾದ್ರೂ ಹೇಳಲಿ, 2028ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯಾರೇನೇ ಹೇಳಲಿ, ಅಥವಾ ತಾನು ಹೀಗೆ ಹೇಳುತ್ತಿರುವುದಕ್ಕೆ ಹುಚ್ಚ ಅನ್ನಲಿ,
Advertisement
ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಅಂತ ಹೇಳಲಿ ಅಥವಾ ಹತಾಶನಾಗಿದ್ದಾನೆ ಅಂತಾದ್ರೂ ಹೇಳಲಿ, 2028 ರಲ್ಲಿ ತಾನೇ ರಾಜ್ಯದ ಮುಖ್ಯಮಂತ್ರಿಯಾಗೋದು ಎಂದು ಹೇಳಿದರು.
ಇನ್ನೂ ಕಾರ್ಯಕರ್ತರು ಎದೆಗುಂದುವುದು ಬೇಡ, ಯಾಕೆಂದರೆ ಜೀವನ ಅಮೂಲ್ಯವಾದದ್ದು, ಅದು ಹೋಯಿತು ಅಂತಾದರೆ ಮರಳಿ ಪಡೆಯುವುದು ಸಾಧ್ಯವಿಲ್ಲ, ಸಂತೋಷ್ ಪತ್ನಿ ಮತ್ತು ಪುಟ್ಟ ಪುಟ್ಟ ಮಕ್ಕಳನ್ನು ಅಗಲಿದ್ದಾನೆ, ಕುಟುಂಬಕ್ಕೆ ಕೈಲಾದ ನೆರವು ನೀಡುತ್ತೇನೆ ಎಂದು ಯತ್ನಾಳ್ ಹೇಳಿದರು.