ಬೆಂಗಳೂರು: ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಮಹದಾಯಿ ಹೋರಾಟಗಾರ, ಶಾಸಕ ಕೋನರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಗೋವಾ ಸಿಎಂ ಈ ರೀತಿ ಮಾತನಾಡಿರೋದು ಸರಿಯಲ್ಲ. ಕೇಂದ್ರ ಅನುಮತಿ ಕೊಡಲ್ಲ ಎಂದು ಹೇಳಿಕೆ ನೀಡೋಕೆ ಇವರ್ಯಾರು? ಗೋವಾದಲ್ಲಿ ಇಬ್ಬರು ಸಂಸದರಿದ್ದಾರಷ್ಟೇ. ನಮ್ಮಲ್ಲಿ 28 ಸಂಸದರಿದ್ದಾರೆ. ಅವರ ಮಾತು ಕೇಂದ್ರ ಕೇಳುತ್ತಾ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ನಾವು ಹಾಲು, ಕಾಯಿಪಲ್ಯ ನಿಲ್ಲಿಸಿದ್ರೆ ಗೋವಾಗೆ ಏನು ಸಿಗೋದಿಲ್ಲ, ನೆನಪಿರಲಿ. ಗೋವಾದವರು ಏನೇ ಮಾಡಿದ್ರು ಮಹದಾಯಿ ತಡೆಯೋಕೆ ಆಗೊಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸರ್ವಪಕ್ಷದ ಸಭೆ ಕರೆದು, ಪ್ರಧಾನಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗುವಂತೆ ಮನವಿ ಮಾಡ್ತೇನೆ ಎಂದಿದ್ದಾರೆ.