ಕೊಪ್ಪಳ:- ಮುಖ್ಯಮಂತ್ರಿ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯವನ್ನು ಮಾಡಿಲ್ಲ. ಸಿದ್ದರಾಮಯ್ಯ ಸಾಹೇಬರೇ 5 ವರ್ಷ ಸಿಎಂ ಆಗಿ ಮುಂದುವರೆಯತ್ತಾರೆಂದು ನಮ್ಮ ಎಲ್ಲ ಮುಖಂಡರು ಹೇಳಿದ್ದಾರೆ. ನಾನಷ್ಟೇ ಅಲ್ಲ, ಎಲ್ಲ ಮುಖಂಡರು ಹೇಳಿದ್ದಾರೆ. ಯಾರೋ ಒಬ್ಬರು ಹೇಳುತ್ತಾರೆ ಎಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಪಕ್ಷದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲ್ಲ ಎಂದರು.
ಈಗಾಗಲೇ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಕೊಡಲಾಗಿದೆ. ಕೇವಲ ನೋಟಿಸ್ ಅಲ್ಲ, ಅವರ ಮೇಲೆ ಕ್ರಮ ಆಗುತ್ತದೆ. ಇನ್ನೂ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ಸಿದ್ದರಾಮಯ್ಯ ಸಾಹೇಬರ ಬಗ್ಗೆ ಯಾರೂ ಮಾತಾಡಿಲ್ಲ. ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಹಾಗೂ ಅನುದಾನ ಎಲ್ಲರಿಗೂ ಸಿಕ್ಕಿದೆ. ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.