ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ಡಾ ರವಿ ಪಾಟೀಲ್ ಮನವಿ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಲಕ್ಷ್ಮಿ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅವಶ್ಯಕತೆಯಿದೆ. ಅದರೆ ರಾಜಕಾರಣಿಗಳಿಗಳು ಮತ್ತು ಅಭಿಮಾನಿಗಳು ಎಡೆಬಿಡದೆ ಆಸ್ಪತ್ರೆಗೆ ಭೇಟಿ ನೀಡಿ ಸಚಿವೆಯ ವಿಶ್ರಾಂತಿಗೆ ಭಂಗ ತರುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಅವರು ತಲೆನೋವಿನಿಂದ ಬಳಲಿದ್ದಾರೆ ಮತ್ತು ಸ್ಮೃತಿ ತಪ್ಪುವ ಸೆನ್ಸೇಷನ್ ಕಾಡಿದೆ.
ನ್ಯೂರೋ ಸರ್ಜನ್ ಒಬ್ಬರು ಸಚಿವೆಯನ್ನು ಪರೀಕ್ಷಿಸಿ ವಿಶ್ರಾಂತಿಯಿಲ್ಲದ ಕಾರಣ ಹಾಗಾಗುತ್ತಿದೆ, ಅವರಿಗೆ 48 ತಾಸು ಕಂಪ್ಲೀಟ್ ರೆಸ್ಟ್ ಬೇಕು, ಮಾತಾಡಲೇಬಾರದು ಎಂದಿದ್ದಾರೆ. ಹಾಗಾಗಿ, ಅವರನ್ನು ನೋಡಲು, ಅರೋಗ್ಯ ವಿಚಾರಿಸಲು ಯಾರೂ ಬರಬಾರದು ಮನವಿ ಮಾಡಿದ್ದಾರೆ.