ಮಂಗಳೂರು: ಜಾತಿಗಣತಿ ವರದಿ ಬಗ್ಗೆ ಬಿಜೆಪಿಯಿಂದ ಯಾವುದೇ ವಿರೋಧ ಇಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು. ಕಾಂಗ್ರೆಸ್ ಸರ್ಕಾರದ ಈ ರೀತಿಯ ನಡೆ ಬಿಜೆಪಿ ಖಂಡಿತ ಒಪ್ಪಲ್ಲ. ಜಾತಿಗಣತಿ ಬಗ್ಗೆ ಬಿಜೆಪಿಯ ನಿಲುವು ಸ್ಪಷ್ಟವಿದೆ.
Advertisement
ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಪ್ರಕ್ರಿಯೆ ಮುಗಿದಿತ್ತು. ಆದರೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲು ಯಾಕೆ ಸಾಧ್ಯ ಆಗಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಸ್ತಾಪ ಮಾಡ್ತಿದ್ದಾರೆ. ತಯಾರಾಗಿರುವ ಕಾಂತರಾಜು ವರದಿ ಬಗ್ಗೆ ಮಾಹಿತಿ ತೆಗೆದುಕೊಂಡಿಲ್ಲ. ಒಳಜಾತಿ ಪಕ್ಕಕ್ಕಿಟ್ಟು ಅವರಿಗೆ ಅನುಕೂಲ ಆಗುವ ವರದಿ ನೀಡಿದ್ದಾರೆ. ಸದ್ಯ ಈ ರೀತಿಯ ಚರ್ಚೆ ನಡೆಯುತ್ತಿದೆ ಎಂದರು.