ಮೈಸೂರು: ಯಾವುದೇ ಪಕ್ಷದ ನಾಯಕರು ಪಕ್ಷ ಸೇರುವ ಆಮಿಶದೊಂದಿಗೆ ತನ್ನನ್ನು ಸಂಪರ್ಕಿಸಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ಶ್ರೀರಾಮನ ಸನ್ನಿಧಿಯಲ್ಲಿ ಮಾತಾಡುತ್ತಿದ್ದೇನೆ, ಯಾವುದೇ ಪಕ್ಷದ ನಾಯಕರು ಪಕ್ಷ ಸೇರುವ ಆಮಿಶದೊಂದಿಗೆ ತನ್ನನ್ನು ಸಂಪರ್ಕಿಸಿಲ್ಲ ಮತ್ತು ತಾನು ಸಹ ಬೇರೆ ಪಕ್ಷ ಸೇರುತ್ತಿಲ್ಲ ಎಂದು ಹೇಳಿದರು.
ಇನ್ನೂ ಪುಟ್ಟರಾಜು ಮತ್ತು ಸಾರಾ ಮಹೇಶ್ ತನ್ನೊಂದಿಗೆ ಮಾತಾಡಲು ಮನೆಗೆ ಬಂದಿದ್ದು ಸತ್ಯ, ಜಿಲ್ಲಾ ಮತ್ತು ಪಂಚಾಯತ್ ಚುನಾವಣೆಗಳಲ್ಲೂ ಭಾಗಿಯಾಗಲ್ಲವೆಂದು ಹೇಳಿದ್ದೇನೆ ಶಾಸಕ ಜಿಟಿ ದೇವೇಗೌಡ ಹೇಳಿದರು.