ಟಾಲಿವುಡ್ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಆರ್ ಜಿ ವಿ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡ್ತಿರ್ತಾರೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸರಿಯಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ ಅಂತ ಟ್ವೀಟ್ ಮಾಡಿ, ವ್ಯಾಪಕ ಟೀಕೆಗೂ ಗುರಿಯಾಗಿದ್ದ ವರ್ಮಾ ಇದೀಗ ರಜನಿಕಾಂತ್ ಬಗ್ಗೆ ಪ್ರಶಂಸನೀಯ ಹೇಳಿಕೆ ಒಂದನ್ನು ನೀಡಿದ್ದು ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಸಿನಿಮಾ ಕಂಪ್ಲಿಟ್ ಆಗಲ್ಲ ಎಂದಿದ್ದಾರೆ. ಸದ್ಯ ಈ ಹೇಳಿಕೆ ರಜನಿಕಾಂತ್ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರಾಮ್ ಗೋಪಾಲ್ ವರ್ಮಾ ಸ್ಟಾರ್ ಮತ್ತು ಸಾಮಾನ್ಯ ನಟನ ಬಗ್ಗೆ ವ್ಯತ್ಯಾಸ ತಿಳಿಸುವ ಸಲುವಾಗಿ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಉದಾಹರಣೆ ನೀಡಿದ್ದು ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ ಎಂದಿದ್ದಾರೆ. ನಟ ಎಂದರೆ ಒಂದು ಪಾತ್ರ, ಸ್ಟಾರ್ ಎಂದರೆ ಅದು ಅಭಿನಯ, ಇವೆರಡು ಮೇಲ್ನೋಟಕ್ಕೆ ಒಂದೇ ಅನಿಸಿದರೂ ಇವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿ ರಜನಿಕಾಂತ್ ಅವರನ್ನೇ ಉದಾಹರಣೆಯಾಗಿ ಹೇಳಿಕೆ ನೀಡಿದ್ದಾರೆ.
ರಜನಿಕಾಂತ್ ಓರ್ವ ಉತ್ತಮ ನಟನೆ? ಅದರ ಬಗ್ಗೆ ನನಗೆ ಗೊತ್ತಿಲ್ಲ. ರಜನಿಕಾಂತ್ ಅವರು ಎಲ್ಲ ತರನಾದ ಪಾತ್ರ ಮಾಡುತ್ತಾರೆ ಎಂದು ನನಗೆ ಅನಿಸಲಾರದು. ಆದರೆ ಸ್ಲೋಮೋಷನ್ ಅನ್ನು ಅವರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಸ್ಲೋಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೆ ನೀಡಿದ್ದಾರೆ.
ಅಭಿಮಾನಿಗಳಿಗೂ ಅವರ ಸ್ಲೋಮೋಷನ್ ಸ್ಟೆಪ್ , ಫೈಟ್, ಕತೆ ಸಾಗುವ ಪರಿ ಇಷ್ಟ. ಹೀಗಾಗಿ ಅವರ ಸಿನಿಮಾದಲ್ಲಿ ರಜನಿಕಾಂತ್ ಏನು ಮಾಡದೆಯೂ ಸಿನೆಮಾ ಹಿಟ್ ಆಗಲಿದೆ. ಇವರ ಸ್ಲೋಮೋಷನ್ ಸಿಕ್ವೆನ್ಸ್ ಗಳೇ ಅಭಿಮಾನಿಗಳಿಗೆ ಕಿಕ್ ಮತ್ತು ಎಕ್ಸೈಟ್ ಮೆಂಟ್ ನೀಡಲಿದೆ ಎಂದು ಹೇಳಿದ್ದಾರೆ.