ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಶಾದಿಮಹಲ್ ಕಟ್ಟಲು ಅವಕಾಶ ಕೊಡಬಾರದು ಎಂದು ಕ್ರಾಂತಿ ಸೇನಾ ಸಂಘಟನೆ ಬಾಬು ಬಾಕಳೆ ಅವರ ನೇತೃತ್ವದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಾಬು ಬಾಕಳೆ ಮಾತನಾಡಿ, ಗದುಗಿನ ಹಿಂದೂ ಸಮಾಜ ಪೂಜಿಸುವಂತಹ ಶ್ರೀ ಜೋಡ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಮುಸ್ಲಿಂ ಸಮಾಜದವರು ಶಾದಿಮಹಲ ಕಟ್ಟುತ್ತಿರುವುದು ಖಂಡನೀಯ.
ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದಲ್ಲದೆ, ದೇವಸ್ಥಾನದ ಪವಿತ್ರತೆಗೂ ಭಂಗ ಬರಬಹುದು ಎಂದರು.
ಬಿಜೆಪಿ ಯುವ ಮುಖಂಡ ಸುಧೀರ್ ಕಾಟಿಗರ್, ರಾಣಿ ಚಂದಾವರ ಮಾತನಾಡಿ, ಗದಗ ನಗರದಲ್ಲಿ ಈ ಹಿಂದಿನಂತೆಯೇ ಕೋಮು ಸೌಹಾರ್ದತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದರು.
ಪದ್ಮಾ ಗುಜಲ್, ರೇಣುಕಾ ಕಬಾಡಿ, ಭೀಮಾ ಕಾಟಿಗರ್, ಭರತ್ ಮಾರಿಯಪ್ಪನವರ್, ಪ್ರವೀಣ್ ಹಬೀಬ್, ಪರಶುರಾಮ್ ಖಟವಟೆ, ವಿನೋದ್ ಬಾಂಡಗೆ, ಆನಂದ್ ಸರೋದೆ, ಶ್ರೀಕಾಂತ್ ಬಾಕಳೆ, ಸತೀಶ್ ಪೂಜಾರಿ, ರಾಮು, ಪವನ್ ಪುರದ, ಶಿವು ಕಂಬಾರ್ ಮುಂತಾದವರು ಪಾಲ್ಗೊಂಡಿದ್ದರು.