ಬೆಂಗಳೂರು: ಜಾಲಿವುಡ್ ಸ್ಟುಡಿಯೋಗೆ ಯಾವುದೇ ಕಾಲಾವಕಾಶ ಕೊಟ್ಟಿಲ್ಲ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ ಸಂಸ್ಥೆಗೆ ನೋಟಿಸ್ ಕೊಟ್ಟಿರೋದು.
ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು.
ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ.
ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು.